Friday, 20th September 2024

ಕಾರ್ಮಿಕನ ಪುತ್ರನಿಗೆ ಅಮೆರಿಕದಲ್ಲಿ ವ್ಯಾಸಂಗ, 2.5 ಕೋಟಿ ರೂಪಾಯಿ ಶಿಷ್ಯವೇತನ

ಪಾಟ್ನಾ: ಬಿಹಾರದ ದಿನಗೂಲಿ ಕಾರ್ಮಿಕನ 17 ವರ್ಷದ ಮಗನಾದ ಪ್ರೇಮ್‌ ಕುಮಾರ್‌ ಎಂಬಾತನಿಗೆ ಅಮೆರಿಕದಲ್ಲಿ ಪದವಿ ವ್ಯಾಸಂಗ ಮಾಡುವ ಅದೃಷ್ಟ ಹಾಗೂ 2.5 ಕೋಟಿ ರೂಪಾಯಿ ಶಿಷ್ಯವೇತನ ಪಡೆದಿದ್ದಾನೆ.

ವಿದ್ಯಾರ್ಥಿವೇತನಕ್ಕಾಗಿ ಪ್ರೇಮ್‌ ಕುಮಾರ್‌ ಸಂಬಂಧಿಸಿದ ಪರೀಕ್ಷೆ ಎದುರಿಸಿದ್ದು, ಜಗತ್ತಿನಲ್ಲಿ 6 ನೇ ರ್ಯಾಂಕ್ ಪಡೆದಿದ್ದಾರೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಲು ಅಮೆರಿಕದ ಪ್ರತಿಷ್ಠಿತ ಲಫಯೆಟ್ಟೆ ಕಾಲೇಜಿನಿಂದ 2.5 ಕೋಟಿ ರೂ.ಗಳ ಶಿಷ್ಯವೇತನ ಪಡೆದಿದ್ದಾರೆ.

ಬಿಹಾರದ ರಾಜಧಾನಿ ಪಾಟ್ನಾದ ಫುಲ್ವಾರಿ ಷರೀಫ್‌ನ ಗೋನ್‌ಪುರ ನಿವಾಸಿ ಪ್ರೇಮ್ ಕುಮಾರ್‌ಗೆ ಅಮೆರಿಕದ ಲಫಯೆಟ್ಟೆ ಕಾಲೇಜು ಈ ವಿದ್ಯಾರ್ಥಿವೇತನ ನೀಡಿದೆ. ಈ ವಿದ್ಯಾರ್ಥಿವೇತನಕ್ಕಾಗಿ ಭಾರತದಿಂದ 6 ಹೆಸರುಗಳು ಹೋಗಿವೆ.

ಪ್ರೇಮ್ ಅವರ ತಂದೆ ದಿನಗೂಲಿ ಕಾರ್ಮಿಕರಾಗಿದ್ದು, 12 ವರ್ಷಗಳ ಹಿಂದೆ ತಾಯಿ ಪಾರ್ಶ್ವವಾಯುವಿಗೆ ತುತ್ತಾಗಿ ಮೃತಪಟ್ಟಿ ದ್ದಾರೆ. ದಿನಗೂಲಿ ಕಾರ್ಮಿಕರಾದರೂ ತಂದೆ ಮಗನ ವಿದ್ಯಾಭ್ಯಾಸಕ್ಕೆ ಆಸರೆಯಾಗಿ ದ್ದರು. ಪ್ರೇಮ್ 2.5 ಕೋಟಿ ಸ್ಕಾಲರ್‌ಶಿಪ್ ಪಡೆದ ಭಾರತದ ಏಕೈಕ ಯುವಕ ಎನಿಸಿಕೊಂಡಿದ್ದಾರೆ.

ಪ್ರೇಮ್ ಯಶಸ್ಸಿನಿಂದಾಗಿ ಕುಟುಂಬಸ್ಥರಲ್ಲಿ ಸಂಭ್ರಮದ ವಾತಾವರಣವಿದೆ. ಪ್ರೇಮ್ ಅವರ ಅಕ್ಕ ಮತ್ತು ತಂದೆ ಕೂಡ ತುಂಬಾ ಸಂತೋಷವಾಗಿದ್ದಾರೆ. ಎಲ್ಲರೂ ಓದಬೇಕು ಮತ್ತು ಕಷ್ಟಪಟ್ಟು ಕೆಲಸ ಮಾಡಿ ತಮ್ಮ ಯಶಸ್ಸನ್ನು ಸಾಧಿಸಬೇಕು, ಕಠಿಣ ಪರಿಶ್ರಮವಿಲ್ಲದೆ ಯಾವುದೇ ಯಶಸ್ಸು ಸಿಗುವುದಿಲ್ಲ ಎಂದು ಕುಟುಂಬದವರು ಹೇಳಿದರು.