Friday, 22nd November 2024

ಬುಡಕಟ್ಟು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್ ಶಿಪ್

ರಾಂಚಿ: ಜಾರ್ಖಂಡ್ ರಾಜ್ಯ ಸರ್ಕಾರಮೊದಲ ಬಾರಿಗೆ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ವಿದೇಶಿ ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್ ಶಿಪ್ ಯೋಜನೆ ಜಾರಿಗೊಳಿಸಿದೆ. ಅದರ ಪ್ರಕಾರ ವರ್ಷಕ್ಕೆ 10 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಈ ಯೋಜನೆಗೆ ಮರಂಗ್ ಗೋಮ್ಕೆ ಜೈಪಾಲ್ ಸಿಂಗ್ ಮುಂಡಾ ಎಂದು ನಾಮಕರಣ ಮಾಡಿದ್ದು, ರಾಜ್ಯದ ಎಸ್ ಟಿ ವರ್ಗಕ್ಕೆ ಸೇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಯ್ಕೆಯಾದ ಅಭ್ಯರ್ಥಿಗಳು ಈ ಸ್ಕಾಲರ್ ಶಿಪ್ ಸಹಾಯದಿಂದ ಇಂಗ್ಲೆಂಡ್ ಮತ್ತು ಐರ್ಲೆಂಡ್ ದೇಶಗಳಲ್ಲಿನ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಪಡೆದುಕೊಳ್ಳಬಹುದಾಗಿದೆ.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಸ್ವೀಕೃತ ಅರ್ಜಿಗಳಲ್ಲಿ 6 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಇದೀಗ ಯೋಜನೆಯಡಿ 6 ಮಂದಿ ವಿದ್ಯಾರ್ಥಿಗಳು ಇಂಗ್ಲೆಂಡಿನ 5 ವಿವಿಧ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡಲಿದ್ದಾರೆ.