ಮಾಚನಪಲ್ಲಿ ಮತ್ತು ಕೋಡೂರಿನ ನಡುವೆ ಈ ಘಟನೆ ನಡೆದಿದೆ. ಇಲ್ಲಿ ರೈಲ್ವೆಯ ಕೆಳ ಸೇತುವೆ ಕಾಮ ಗಾರಿ ನಡೆಯುತ್ತಿದೆ. ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಕಾರಣ, ಮಳೆ ನೀರು ಅಂಡರ್ ಬೈಪಾಸ್ನಲ್ಲಿ ಶೇಖರಣೆಯಾಗಿತ್ತು.
ಇದನ್ನರಿಯದ ಖಾಸಗಿ ಶಾಲೆಯೊಂದರ ಬಸ್ ರೈಲು ಸೇತುವೆಯ ಕೆಳಗೆ ಹಾದು ಹೋಗುವ ವೇಳೆ ಅಲ್ಲೇ ಸಿಲುಕಿಕೊಂಡಿದೆ. ಬಸ್ಸಿ ನೊಳಗೆ ನೀರು ನುಗ್ಗಿ ವಾಹನದ ಅರ್ಧದಷ್ಟು ಭಾಗ ಮುಳುಗಿದ್ದನ್ನು ಕಂಡ ಸ್ಥಳೀಯರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.