Thursday, 12th December 2024

ಅಪರಿಚಿತ ಉಗ್ರರಿಂದ ಪ್ರಾಂಶುಪಾಲ, ಶಿಕ್ಷಕರ ಹತ್ಯೆ

ಶ್ರೀನಗರ: ಬಂಡಿಪೋರಾದಲ್ಲಿ ಮೂವರು ನಾಗರಿಕರನ್ನು ಹೊಡೆದುರುಳಿಸಿದ ಎರಡು ದಿನಗಳ ಬಳಿಕ ಅಪರಿಚಿತ ಉಗ್ರರು ಶ್ರೀನಗರದ ಸಫಾ ಕಡಲ್​ ಪ್ರದೇಶದಲ್ಲಿ ಪ್ರಾಂಶುಪಾಲರು ಹಾಗೂ ಶಿಕ್ಷಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಉಗ್ರರ ಗುಂಡೇಟಿನಿಂದ ಮೃತಪಟ್ಟ ಇಬ್ಬರನ್ನು ಸತೀಂದರ್​ ಕೌರ್​ ಹಾಗೂ ದೀಪಕ್ ಚಾಂದ್​ ಎಂದು ಗುರುತಿಸಲಾಗಿದೆ.

ಇಬ್ಬರೂ ಆಲೋಚಿಬಾಗ್​ನ ನಿವಾಸಿಗಳಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಎಸ್​ಕೆಐಎಂಎಸ್​​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾರ್ಗ ಮಧ್ಯ ದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.