ತೆಲಂಗಾಣ : ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ತೆಲಂಗಾಣ ಸರ್ಕಾರ ಇಂದಿನಿಂದ ಶಾಲಾ-ಕಾಲೇಜು ಆರಂಭಕ್ಕೆ ಅನುಮತಿ ಸಿದೆ ಎನ್ನಲಾಗಿದೆ.
ಇಂದಿನಿಂದ 9, 10 ಹಾಗೂ ದ್ವಿತೀಯ ಪಿಯು ಕಾಲೇಜ್ ಆರಂಭವಾಗಲಿದೆ. ಕೇಂದ್ರ ಸರ್ಕಾರ ಅನ್ ಲಾಕ್ 5.0 ಮಾರ್ಗಸೂಚಿ ಯಂತೆ ಶಾಲಾ-ಕಾಲೇಜು ಆರಂಭದ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಬಿಟ್ಟಿತ್ತು.
ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದ್ದು, ಕೊರೋನಾ ಮುಂಜಾಗ್ರತಾ ಕ್ರಮಗಳೊಂದಿಗೆ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭಿಸಲಾಗುತ್ತಿದೆ. 7, 10 ಹಾಗೂ ದ್ವಿತೀಯ ಪಿಯು ತರಗತಿಗಳು ಆರಂಭವಾಗಲಿವೆ.
ನ.16ರಿಂದ ಪ್ರಥಮ ಪಿಯು ತರಗತಿ, ನ.23ರಿಂದ 6, 7, 8ನೇ ತರಗತಿ ಪ್ರಾರಂಭ ಮತ್ತು ಡಿ.17ರಿಂದ 1 ರಿಂದ 5ನೇ ತರಗತಿ ಆರಂಭ ವಾಗಲಿದೆ ಎಂಬುದಾಗಿ ತಿಳಿಸಿದೆ.