Sunday, 15th December 2024

ಶೀತಲೀಕರಿಸಿದ ಮೀನುಗಳ ಆಮದಿಗೆ ಕತಾರ್‌ನಲ್ಲಿ ನಿರ್ಬಂಧ ವಾಪಸ್‌

ವದೆಹಲಿ: ಭಾರತದಿಂದ ಶೀತಲೀಕರಿಸಿದ ಮೀನುಗಳ ಆಮದಿಗೆ ಹೇರಲಾಗಿದ್ದ ತಾತ್ಕಾಲಿಕ ನಿರ್ಬಂಧವನ್ನು ಕತಾರ್‌ ವಾಪಸ್‌ ಪಡೆದಿದೆ.

ಹೀಗಾಗಿ, ಸೀಫುಡ್ ರಫ್ತು ಪ್ರಮಾಣ ಹೆಚ್ಚಲಿದ್ದು, ಪಶ್ಚಿಮ ಏಷ್ಯಾ ದೇಶದೊಂದಿಗಿನ ದ್ವಿಪಕ್ಷೀಯ ಸಂಬಂಧವೂ ಸುಧಾರಿಸಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.

ಭಾರತದಿಂದ ರಫ್ತಾಗಿದ್ದ ಸೀಫುಡ್ ನ‌ಲ್ಲಿ ವಿಬಿಯೋ ಕಾಲರಾ ಎಂಬ ಸೋಂಕು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷದ ನವೆಂಬರ್‌ನಲ್ಲಿ ಅಂದರೆ ಫಿಫಾ ವಿಶ್ವಕಪ್‌ ಮುಂಚೆ, ಸೀಫುಡ್ ಆಮದು ಮೇಲೆ ಕತಾರ್‌ ನಿಷೇಧ ಹೇರಿತ್ತು. ಅಂದಿನಿಂದಲೂ ಕೇಂದ್ರ ವಾಣಿಜ್ಯ ಸಚಿವಾಲಯವು ಕತಾರ್‌ನ ರಾಯಭಾರ ಕಚೇರಿಯೊಂದಿಗೆ ನಿರಂತರ ಮಾತು ಕತೆ ನಡೆಸಿದ್ದು, ನಿಷೇಧ ವಾಪಸ್‌ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಲೇ ಇತ್ತು. ಇದರ ಪರಿಣಾಮ, ಈಗ ಭಾರತದಿಂದ ಆಮದಾಗುವ ಮೀನುಗಳ ಮೇಲಿನ ನಿರ್ಬಂಧವನ್ನು ಕತಾರ್‌ ತೆಗೆದು ಹಾಕಿದೆ.

ಆದರೆ, ಚಿಲ್ಡ್‌ ಸೀಫುಡ್ ರಫ್ತು ಮೇಲಿನ ನಿರ್ಬಂಧ ಮುಂದುವರಿಯಲಿದೆ.