Friday, 22nd November 2024

ಸುಸ್ಥಿದಾರರ ಮಾಹಿತಿ ನೀಡುವವರಿಗೆ 20 ಲಕ್ಷ ರೂ ಬಹುಮಾನ: ಸೆಬಿ

ಮುಂಬೈ: ವಂಚಕರಿಂದ ಬಾಕಿ ಬರಬೇಕಾದ ದುಡ್ಡು ವಸೂಲಿ ಮಾಡಲು ಮಾರ್ಗ ಕಂಡುಕೊಂಡಿ ರುವ ಮಾರುಕಟ್ಟೆ ನಿಯಂತ್ರಕ ಸೆಬಿ, ಸುಸ್ಥಿದಾರರ ಮಾಹಿತಿ ನೀಡುವವರಿಗೆ 20 ಲಕ್ಷ ರೂಗಳ ಬಹುಮಾನ ನೀಡಲು ಮುಂದಾಗಿದೆ.

ಮೀಸಲಿನಲ್ಲಿರುವ ಮೊತ್ತದ ಎರಡೂವರೆ ಪ್ರತಿಶತ ಅಥವಾ ಐದು ಲಕ್ಷ ರೂಗಳು ಅಥವಾ ಇವೆರಡಲ್ಲಿ ಯಾವುದು ಕಡಿಮೆಯೋ ಅದನ್ನು ಮಧ್ಯಂತರ ಬಹುಮಾನ ಹಾಗೂ ಅಂತಿಮ ಬಹುಮಾನವಾಗಿ ವಸೂಲು ಮಾಡಲಾದ ಮೊತ್ತದ 10 ಪ್ರತಿಶತ ಅಥವಾ 20 ಲಕ್ಷ ರೂಗಳಲ್ಲಿ ಯಾವುದು ಕಡಿಮೆಯೋ ಅದನ್ನೇ ನೀಡಲಾಗುವುದು.

ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಸೆಬಿ ಹೊರತಂದಿರುವ ಮಾರ್ಗಸೂಚಿಗಳಲ್ಲಿ ತಿಳಿಸಿದೆ.

‘ವಸೂಲು ಮಾಡಲು ಕಠಿಣ’ ಎನ್ನಬಹುದಾದಷ್ಟು ಬಾಕಿ ಉಳಿಸಿಕೊಂಡಿರುವ ಸುಸ್ಥಿದಾರರ ಕುರಿತು ವಿಶ್ವಾಸಾರ್ಹ ಮಾಹಿತಿಗಳನ್ನು ಕೊಡಮಾಡುವ ಮಾಹಿತಿದಾರರನ್ನು ಈ ಬಹುಮಾನಕ್ಕೆ ಪರಿಗಣಿಸಲಾಗುವುದು ಎಂದು ಸೆಬಿ ತಿಳಿಸಿದೆ.

ಈ ಸಂಬಂಧ 515 ಸುಸ್ಥಿದಾರರ ಹೆಸರುಗಳನ್ನು ಸೆಬಿ ಬಿಡುಗಡೆ ಮಾಡಿದ್ದು, ಇವರ ಬಗ್ಗೆ ಮಾಹಿತಿಗಳನ್ನು ಒದಗಿಸುವಂತೆ ಕೋರಿದೆ.

ಬಹುಮಾನಕ್ಕೆ ಮಾನ್ಯತೆಗಳನ್ನು ನಿರ್ಧರಿಸುವ ಉದ್ದೇಶಕ್ಕಾಗಿ ವಸುಲಾತಿ ಹಾಗೂ ರೀಫಂಡ್ ಇಲಾಖೆಯ ಮುಖ್ಯ ಮಹಾ ನಿರ್ದೇಶಕ ಹಾಗೂ ವಸೂಲಾತಿ ಅಧಿಕಾರಿ ಹಾಗೂ ಸಂಬಂಧಪಟ್ಟ ವಸೂಲಾತಿಯ ವ್ಯಾಪ್ತಿಯ ಅಧಿಕಾರಿ ಹಾಗೂ ಹೂಡಿಕೆದಾರರ ಸಲಹೆ ಮತ್ತು ಶಿಕ್ಷಣದ ಕಾರ್ಯಾಲಯದ ಉನ್ನತ ಸಿಬ್ಬಂದಿಯನ್ನು ಈ ಸಮಿತಿಯಲ್ಲಿ ನೇಮಕ ಮಾಡಲಾಗುವುದು.