Sunday, 6th October 2024

ಬಾಲಿವುಡ್ ನಟ ಸೇರಿ 45 ಮಂದಿಗೆ ಸೆಬಿ ಬ್ಯಾನ್‌

ಮುಂಬೈ: ಬಾಲಿವುಡ್ ನಟ ಅರ್ಷದ್ ವಾರ್ಸಿ ಮತ್ತು ಆತನ ಪತ್ನಿ ಮಾರಿಯಾ ಗೊರೆಟ್ಟಿ ಸೇರಿದಂತೆ ಒಟ್ಟಾಗಿ 45 ಮಂದಿಯನ್ನು ಮತ್ತು ಸಂಸ್ಥೆಗಳನ್ನು ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾಸ್ಟಾಕ್ ಮಾರುಕಟ್ಟೆಯಿಂದ ಬ್ಯಾನ್ ಮಾಡಿದೆ.

ಶಾರ್ಪ್‌ಲೈನ್ ಬ್ರಾಡ್‌ಕಾಸ್ಟ್ ಲಿಮಿಟೆಡ್ ಮತ್ತು ಸದ್ನ ಬ್ರಾಡ್‌ಕಾಸ್ಟ್ ಲಿಮಿಟೆಡ್ ಬಗ್ಗೆ ಯೂಟ್ಯೂಬ್‌ನಲ್ಲಿ ತಪ್ಪು ವಿಡಿಯೋ ಹಾಕುವ ಮೂಲಕ ಷೇರು ದರ ಮ್ಯಾನಿಪುಲೇಷನ್ ಮಾಡುತ್ತಿದೆ ಎಂಬ ಆರೋಪವಿದೆ.

ಶಾರ್ಪ್‌ಲೈನ್ ಬ್ರಾಡ್‌ಕಾಸ್ಟ್ ಲಿಮಿಟೆಡ್ ಮತ್ತು ಸದ್ನ ಬ್ರಾಡ್‌ಕಾಸ್ಟ್ ಲಿಮಿಟೆಡ್ ಸ್ಟಾಕ್‌ಗಳನ್ನು ಖರೀದಿ ಮಾಡು ವಂತೆ, ಈ ಸಂಸ್ಥೆ ಲಾಭದಲ್ಲಿದೆ ಎಂಬಂತೆ ಸುಳ್ಳು ಮತ್ತು ತಪ್ಪಾದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ ಲೋಡ್ ಮಾಡಲಾಗಿದೆ. ಇದು ಸೆಬಿ ಗಮನಕ್ಕೆ ಬಂದಿದ್ದು, ಕ್ರಮ ಕೈಗೊಳ್ಳಲಾಗಿದೆ.

ಸುಮಾರು 45 ಮಂದಿ/ಸಂಸ್ಥೆಗಳಿಗೆ ಸ್ಟಾಕ್ ಮಾರುಕಟ್ಟೆಯಿಂದ ಬ್ಯಾನ್ ಮಾಡುವುದು ಮಾತ್ರವಲ್ಲದೆ ಯೂಟ್ಯೂಬ್ ಚಾನೆಲ್‌ನಲ್ಲಿ ತಪ್ಪು ಮಾಹಿತಿ ನೀಡುವ ವಿಡಿಯೋವನ್ನು ಅಪ್‌ಲೋಡ್ ಮಾಡಿದ ಬಳಿಕ ಗಳಿಸಿದ 54 ಕೋಟಿ ರೂಪಾಯಿಯನ್ನು ವಶಕ್ಕೆ ಪಡೆದುಕೊಂಡಿದೆ. 

ಆದೇಶದ ಪ್ರಕಾರ ಅರ್ಷದ್ ವಾರ್ಸಿ 29.43 ಲಕ್ಷ ರೂಪಾಯಿ ಲಾಭವನ್ನು ಪಡೆದಿದ್ದರೆ, ನಟ ಅರ್ಷದ್ ವಾರ್ಸಿ ಪತ್ನಿ ಮಾರಿಯಾ ಗೊರೆಟ್ಟಿ 37.56 ಲಕ್ಷ ಲಾಭವನ್ನು ಪಡೆದಿದ್ದಾರೆ. ಇನ್ನು ಇಕ್ಬಾಲ್ ಹುಸೈನ್ ವಾರ್ಸಿ 9.34 ಲಕ್ಷ ರೂಪಾಯಿ ಲಾಭವನ್ನು ಗಳಿಸಿದ್ದಾರೆ.

Read E-Paper click here