Thursday, 12th December 2024

ಜೈಪುರನಲ್ಲಿ ಎರಡನೇ ಮದುವೆಯಾದ ಐಎಎಸ್‌ ಅಧಿಕಾರಿ

ಜೈಪುರ: ಯುಪಿಎಸ್‌ಸಿ ಪರೀಕ್ಷೆಯ 2016ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ ಟೀನಾ ದಾಬಿ ಜೈಪುರನಲ್ಲಿ ಎರಡನೇ ಮದುವೆಯಾಗಿದ್ದಾರೆ.

ಟೀನಾ ಅವರು ಈ ಹಿಂದೆ ಐಎಎಸ್‌ ಅಧಿಕಾರಿ ಅಥರ್‌ ಅಮೀರ್‌ ಖಾನ್‌ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಕೆಲ ದಿನಗಳ ಹಿಂದೆ ಟೀನಾ ಮತ್ತು ಅಥರ್‌ ಅಮೀರ್‌ ಖಾನ್‌ ವಿಚ್ಛೇದನ ನೀಡಿ ತಮ್ಮಿಬ್ಬರ ಸಂಬಂಧಕ್ಕೆ ಅಂತ್ಯ ಹಾಡಿದ್ದರು.

ಆದರೆ ಟೀನಾ ದಾಬಿ ಮತ್ತೆ ಹಿರಿಯ ಅಧಿಕಾರಿಯ ಜೊತೆಗೆ ಎರಡನೇ ಮದುವೆಯಾಗಿದ್ದು ತಮ್ಮ ಹೊಸ ಜೀವನ ವನ್ನು ಪ್ರಾರಂಭಿಸಿದ್ದಾರೆ. ಟೀನಾ ದಾಬಿ ಜೈಪುರದ ಖಾಸಗಿ ಹೋಟೆಲ್‌ನಲ್ಲಿ ಡಾ. ಪ್ರದೀಪ್‌ ಗವಾಂಡೆ ಅವರೊಂದಿಗೆ ಎರಡನೇ ಮದುವೆಯಾಗಿದ್ದಾರೆ. ಆಪ್ತವರ್ಗದ ಸಂಬಂಧಕರು, ಸ್ನೇಹಿತರು ಕೆಲವು ಅತಿಥಿಗಳು ಹಾಗೂ ಟೀನಾ ಮತ್ತು ಗವಾಂಡೆ ಕುಟುಂಬದ ಸಂಬಂಧಿ ಕರು ಈ ಎರಡನೇ ಮುದುವೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಟೀನಾ ದಾಬಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಡಾ. ಪ್ರದೀಪ್‌ ಗವಾಂಡೆ ಅವರನ್ನು ವಿವಾಹವಾಗಿದ್ದಾರೆ.

ಟೀನಾ ದಾಬಿ ಜೊತೆಗಿನ ಪ್ರದೀಪ್‌ ಗವಾಂಡೆ ಈ ಎರಡನೇ ವಿವಾಹವು ರಾಜಸ್ಥಾನಿ ಮತ್ತು ಮರಾಠಿ ಸಂಪ್ರದಾಯಗಳಂತೆ ನರವೇರಿತು. ಪ್ರದೀಪ್‌ ಅವರ ಕುಟುಂಬವು ಮರಾಠಿಯಾಗಿದ್ದು ಟೀನಾ ಅವರ ಕುಟುಂಬವು ರಾಜಸ್ಥಾನಿಯಾಗಿದ್ದಾರೆ.