ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಕರೋನಾ ವೈರಸ್‌ನ ಒಮಿಕ್ರಾನ್ ವೇರಿಯಂಟ್‌ನ ಎರಡನೇ ಪ್ರಕರಣ ಪತ್ತೆಯಾಗಿದೆ.
ಸೋಂಕು ಇರುವ ರೋಗಿಯು ಕೀನ್ಯಾದಿಂದ ಬಂದವನಾಗಿದ್ದಾನೆ. ’39 ವರ್ಷದ ವಿದೇಶಿ ಪ್ರಯಾಣಿಕ ಡಿ.10 ರಂದು ಕೀನ್ಯಾದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದರು.
ಡಿ.12 ರಂದು ಅವರಿಗೆ ಕೋವಿಡ್ ಸೊಂಕು ತಗುಲಿತ್ತು. ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲರ್ ಬಯಾಲಜಿ, ಹೈದರಾಬಾದ್‌ಗೆ ಕಳುಹಿಸ ಲಾಗಿದ್ದು, ಒಮಿಕ್ರಾನ್ ಪಾಸಿಟಿವ್ ಎಂದು ಘೋಷಿಸಲಾಯಿತು.
ರಾಜ್ಯ ಸರ್ಕಾರವು, ‘ಇದು ಆಂಧ್ರಪ್ರದೇಶದಲ್ಲಿ ಒಮಿಕ್ರಾನ್ ನ ಎರಡನೇ ಪ್ರಕರಣವಾಗಿದೆ. ಇಲ್ಲಿಯವರೆಗೆ, ಒಟ್ಟು 45 ವಿದೇಶಿ ಪ್ರಯಾಣಿಕರು ಮತ್ತು 9 ಸಂಪರ್ಕಗಳು ಪಾಸಿಟಿವ್ ಕಂಡುಬಂದಿವೆ. ಎಲ್ಲಾ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದೆ.