Thursday, 12th December 2024

ಮದ್ಯದೊರೆ ವಿಜಯ್ ಮಲ್ಯ ಗಡೀಪಾರು ಇನ್ನೂ ವಿಳಂಬ

ನವದೆಹಲಿ: ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ.  ಇದಕ್ಕೆ ಬ್ರಿಟನ್’ ನಲ್ಲಿನ ಪ್ರಕರಣಗಳ ರಹಸ್ಯ ವಿಚಾರಣೆ ಕಾರಣವೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಸೋಮವಾರ ತಿಳಿಸಿದೆ.

ಮಲ್ಯ ವಿರುದ್ದ ಪ್ರಕರಣಗಳ ವಿಚಾರಣೆ ಮುಂದಿನ ನವೆಂಬರ್‌ 2ರಂದು ನಡೆಯಲಿದೆ. ತಮ್ಮ ಗಡೀಪಾರು ಆದೇಶಕ್ಕೆ ತಡೆ ನೀಡುವಂತೆ ಕೋರಿ, ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಅಲ್ಲಿನ ನ್ಯಾಯಾಲಯ ವಜಾ ಮಾಡಿದ ಬಳಿಕ, ಮಲ್ಯರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಕುರಿತಂತೆ, ವಿಚಾರಣೆಗಳು ಇನ್ನು ನಡೆಯುತ್ತಿದೆ. ಈ ಕುರಿತು ನಮಗೆ ಹೆಚ್ಚಿನ ಮಾಹಿತಿ ಇಲ್ಲವೆಂದು ಸರ್ಕಾರ, ನ್ಯಾಯಾಲಯಕ್ಕೆ ತಿಳಿಸಿದೆ.

ಮಲ್ಯ ಪರ ವಕೀಲ ಅಂಕುರ್‌ ಸೈಗಲ್ ಅವರನ್ನು ಪ್ರಶ್ನಿಸಿದಾಗ, ಈ ಕುರಿತಂತೆ ನನ್ನ ಕಕ್ಷಿದಾರ ಮಲ್ಯರಿಂದಲೂ ಯಾವುದೇ ಸೂಚನೆ ಬಂದಿಲ್ಲ ಎಂಬುದನ್ನು ಕೋರ್ಟ್‌’ಗೆ ತಿಳಿಸಿದರು. ಈ ಹೇಳಿಕೆಗೆ ಗರಂ ಆದ ಕೋರ್ಟ್‌, ಮಲ್ಯ ಪರ ವಕೀಲರಾಗಿ ಈ ಕುರಿತು ಮಾಹಿತಿ ಹೊಂದಿರ ಬೇಕಿತ್ತು. ನಿಮ್ಮಿಂದ ಬೇಜವಾಬ್ದಾರಿ ಉತ್ತರ ನಿರೀಕ್ಷಿಸುವುದಿಲ್ಲ ಎಂದು ಛೀಮಾರಿ ಹಾಕಿತು.

ಲಂಡನ್‌’ನಲ್ಲಿನ ರಹಸ್ಯ ವಿಚಾರಣೆ ಹಾಗೂ ಮಲ್ಯ ಕೋರ್ಟ್‌’ನಲ್ಲಿ ವಿಚಾರಣೆಗೆ ಯಾವಾಗ ಹಾಜರಿರುವರು ಎಂಬುದರ ಕುರಿತು ಮುಂದಿನ ನವೆಂಬರ್‌ ೨ರಂದು ಮಾಹಿತಿ ನೀಡುವಂತೆ ಮಲ್ಯ ಪರ ವಕೀಲರಿಗೆ ಆದೇಶ ನೀಡಿತು.