Sunday, 15th December 2024

ಮಾಸ್ಕ್‌ ಧರಿಸದಿದ್ದಕ್ಕೆ ರೈಲ್ವೆ ಉದ್ಯೋಗಿಗೆ ಗುಂಡಿಕ್ಕಿದ ಭದ್ರತಾ ಸಿಬ್ಬಂದಿ? ಆಗಿದ್ದಿಷ್ಟೇ…

ಬರೇಲಿ: ರೈಲ್ವೆ ಉದ್ಯೋಗಿಯನ್ನು ಬ್ಯಾಂಕ್ ಆಫ್ ಬರೋಡಾದ ಜಂಕ್ಷನ್ ರಸ್ತೆ ಶಾಖೆಯಲ್ಲಿ ಭದ್ರತಾ ಸಿಬ್ಬಂದಿ ಗುಂಡಿಕ್ಕಿದ ಆಘಾತಕಾರಿ ಘಟನೆ ನಡೆದಿದೆ.

ಮೃತಪಟ್ಟ ಸಂತ್ರಸ್ತನನ್ನ ರಾಜೇಶ್ ಎಂದು ಗುರುತಿಸಲಾಗಿದೆ. ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದ ಕೇಶವ್ ಕುಮಾರ್ ಹಾಗೂ ಆತನ ಮಧ್ಯೆ ಮಾಸ್ಕ್‌ ಧರಿಸುವ ಕುರಿತು ವಾಗ್ವಾದ ನಡೆದಿದ್ದು, ರಾಜೇಶ್‌ ಮೇಲೆ ಗುಂಡು ಹಾರಿಸಲಾಗಿದೆ ಎಂದು ವರದಿಗಳು ಹೇಳಿವೆ.

ಉತ್ತರ ಪ್ರದೇಶ ಪೊಲೀಸರು ಬ್ಯಾಂಕ್‌ ಭದ್ರತಾ ಸಿಬ್ಬಂದಿಯನ್ನ ಬಂಧಿಸಿದ್ದು, ಸಂತ್ರಸ್ತನನ್ನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

 

ಬರೇಲಿ ಪೊಲೀಸರು, ‘ಬರೇಲಿ ಪ್ರದೇಶದ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬ್ಯಾಂಕ್ ಆಫ್ ಬರೋಡಾದಲ್ಲಿ ನೇಮಕಗೊಂಡಿರುವ ಭದ್ರತಾ ಸಿಬ್ಬಂದಿ ಕೇಶವ್ ಅವರು ರಾಜೇಶ್ ತೊಡೆಗೆ ಗುಂಡು ಹಾರಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.