Thursday, 12th December 2024

ನೂತನ ಕೃಷಿ ಕಾಯ್ದೆಗೆ ವಿರೋಧ: 67ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಭಾನುವಾರ 67ನೇ ದಿನಕ್ಕೆ ಕಾಲಿಟ್ಟಿದೆ.

ಕೇಂದ್ರ ಸರ್ಕಾರ ಮತ್ತು ರೈತರ ಮಧ್ಯೆ ಮುಂದಿ ಸುತ್ತಿನ ಮಾತುಕತೆ ಫೆಬ್ರವರಿ 2ರಂದು ನಡೆಯಲಿದೆ. ದೆಹಲಿ-ಹರ್ಯಾಣದ ಸಿಂಘು ಗಡಿಭಾಗದಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ.

ಕಳೆದ ಎರಡು-ಮೂರು ದಿನಗಳಿಂದ ಪ್ರತಿಭಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆ ಯಲ್ಲಿ ರೈತರು ಆಗಮಿಸುತ್ತಿರುವುದರಿಂದ ಭದ್ರತೆ ಯನ್ನು ಮತ್ತಷ್ಟು ಹೆಚ್ಚಿಸ ಲಾಗಿದೆ. ಸರ್ಕಾರ ಗುರಿಯ ನಿಲುವನ್ನು ಬದಲಾಯಿಸುತ್ತಿದೆ. ಸರ್ಕಾರ ಕಾಯ್ದೆ ಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು ಎಂದು ಗಾಜಿಪುರ್ ಗಡಿ ಯಲ್ಲಿ ಪ್ರತಿಭಟನಾ ನಿರತ ರೈತ ಶ್ಯಾಮ್ ಹೇಳುತ್ತಾರೆ.

ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಉಪವಾಸ ಸತ್ಯಾಗ್ರಹ ಮಾಡುತ್ತಾ ದಿನವನ್ನು ಕಳೆದರು.

ಕಳೆದ ಡಿಸೆಂಬರ್ 22ರಿಂದ ಪ್ರತಿದಿನ 11 ರೈತರಂತೆ 24 ಗಂಟೆಗಳ ಕಾಲ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರ್ಕಾರಕ್ಕೆ ಉತ್ತಮ ಉದ್ದೇಶವಿದ್ದರೆ ರೈತರು ಮಾತುಕತೆಗೆ ಸದಾ ಸಿದ್ದವಿದೆ ಎಂದು ರೈತ ನಾಯಕ ತಜಿಂದರ್ ಸಿಂಗ್ ವಿರ್ಕ್ ತಿಳಿಸಿದ್ದಾರೆ.