ಭದ್ರತೆ ಹಿಂತೆಗೆದುಕೊಂಡವರಲ್ಲಿ ಅನೇಕ ನಿವೃತ್ತ ಪೊಲೀಸ್ ಅಧಿಕಾರಿಗಳು, ಧಾರ್ಮಿಕ ಮುಖಂಡರು ಮತ್ತು ರಾಜಕೀಯ ವ್ಯಕ್ತಿಗಳು ಸೇರಿದ್ದಾರೆ.
ಏಪ್ರಿಲ್‌ನಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಮತ್ತು ಇತರ ನಾಯಕರು ಸೇರಿದಂತೆ 184 ಜನರ ಭದ್ರತೆ ಹಿಂತೆಗೆದುಕೊಳ್ಳು ವಂತೆ ಪಂಜಾಬ್ ಸರ್ಕಾರ ಆದೇಶ ನೀಡಿತ್ತು. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಕ್ಯಾಪ್ಟನ್ ಅಮರಿಂದರ್ ಸಿಂಗ್, ಅವರ ಪುತ್ರ ರಣೀಂದರ್ ಸಿಂಗ್, ಕಾಂಗ್ರೆಸ್ ಶಾಸಕ ಪರತಾಪ್ ಸಿಂಗ್ ಬಜ್ವಾವೆರೆ, ಅವರ ಪತ್ನಿ ಹಾಗೂ ಅವರ ಕುಟುಂಬಕ್ಕೆ ಒದಗಿಸಲಾಗಿದ್ದ ಭದ್ರತೆಯನ್ನು ಕಳೆದ ತಿಂಗಳು ಹಿಂಪಡೆಯಲಾಗಿತ್ತು.
ಇತ್ತೀಚೆಗೆ ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ಒಂದು ಪರ್ಸೆಂಟ್ ಕಮಿಷನ್ ಪಡೆ ದಿದ್ದ ಆರೋಗ್ಯ ಸಚಿವರನ್ನೇ ಸಂಪುಟ ದಿಂದ ಕಿತ್ತು ಹಾಕಿ, ಅವರನ್ನು ಬಂಧಿಸುವಂತೆ ಆದೇಶ ಹೊರಡಿಸಲಾಗಿತ್ತು. ಈ ಮೂಲಕ ಪಂಜಾಬ್‌ನ ಆಪ್ ಸರ್ಕಾರ ಹಾಗೂ ಮುಖ್ಯಮಂತ್ರಿ ಭಗವಂತ್ ಮಾನ್ ತೀರ್ಮಾನ ದೇಶದ ಗಮನ ಸೆಳೆದಿತ್ತು.
ಇದೀಗ ಕೈಗೊಂಡಿರುವ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟವನ್ನು ಸಿಎಂ ಮಾನ್ ತಪ್ಪಿಸಿದಂತಾಗಿದೆ.