Sunday, 15th December 2024

16 ಶಾಸಕರಿಗೆ ನೀಡಲಾಗಿದ್ದ ಭದ್ರತೆ ವಾಪಸ್‌

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ.

ಇದರ ಮಧ್ಯೆ 16 ಶಾಸಕರ ಅನರ್ಹತೆ ಕೋರಿ ಡೆಪ್ಯೂಟಿ ಸ್ಪೀಕರ್‌ ಆವರಿಗೆ ಮನವಿ ಸಲ್ಲಿಸಿದ್ದ ಶಿವಸೇನೆ ಈಗ ಮತ್ತೊಂದು ಶಾಕ್‌ ನೀಡಿದೆ. 16 ಶಾಸಕರಿಗೆ ನೀಡಲಾಗಿದ್ದ ಭದ್ರತೆ ಹಿಂಪಡೆದುಕೊಂಡಿದ್ದು, ಇದು ಏಕನಾಥ್‌ ಶಿಂಧೆಯವರ ಸಿಡಿಮಿಡಿಗೆ ಕಾರಣ ವಾಗಿದೆ.

ಒಂದೊಮ್ಮೆ ನಮ್ಮ ಜೀವಗಳಿಗೆ ಅಪಾಯವಾದರೆ ಅದಕ್ಕೆ ಮಹಾರಾಷ್ಟ್ರ ಸರ್ಕಾರವೇ ಹೊಣೆ ಎಂದು ಹೇಳಿದ್ದಾರೆ. ತಮ್ಮೊಂದಿಗೆ ಶಿವಸೇನೆಯ 40 ಕ್ಕೂ ಅಧಿಕ ಶಾಸಕರಿದ್ದು, ನಮ್ಮದೇ ನಿಜವಾದ ಶಿವಸೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಸಚಿವ ಏಕನಾಥ್‌ ಶಿಂಧೆ ನೇತೃತ್ಬದಲ್ಲಿ ಗುವಾಹತಿಯ ಪಂಚತಾರಾ ಹೋಟೆಲ್‌ ರಾಡಿಸನ್‌ ಬ್ಲೂ ನಲ್ಲಿ ಬೀಡುಬಿಟ್ಟಿರುವ ಶಾಸಕರು ಅಲ್ಲಿಂದಲೇ ತಮ್ಮ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.