Saturday, 26th October 2024

Self Harming: JEE ಪರೀಕ್ಷೆಯಲ್ಲಿ ಫೇಲ್‌; ನನ್ನನ್ನು ಕ್ಷಮಿಸಿ ಎಂದು ಡೆತ್‌ನೋಟ್‌ ಬರೆದಿಟ್ಟು ವಿದ್ಯಾರ್ಥಿನಿ ಸೂಸೈಡ್‌

Self harming

ನವದೆಹಲಿ: ದೇಶದೆಲ್ಲೆಡೆ ವೈದ್ಯಕೀಯ, ಎಂಜಿನಿಯರಿಂಗ್‌ ಪ್ರವೇಶ ಕೋಚಿಂಗ್‌ಗೆ ಬರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು(Self Harming) ನಿರಂತರವಾಗಿ ಹೆಚ್ಚುತ್ತಿವೆ. ಇದೀಗ ಮತ್ತೊಂದು ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ಇಂಜಿನಿಯರಿಂಗ್ ಪ್ರವೇಶ ಜಂಟಿ ಪ್ರವೇಶ ಪರೀಕ್ಷೆ (JEE)ಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. 17 ವರ್ಷದ ಬಾಲಕಿಯೊಬ್ಬಳು ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಕಾರಣ ಬೇಸರಗೊಂಡು ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ನಿನ್ನೆ, 11:25 ಗಂಟೆಗೆ, ಓಖ್ಲಾ ಮುಖ್ಯ ಮಾರುಕಟ್ಟೆಯಲ್ಲಿರುವ ಕಟ್ಟಡದ 7 ನೇ ಮಹಡಿಯ ಮೇಲ್ಛಾವಣಿಯಿಂದ 17 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುವತಿ 12ನೇ ತರಗತಿ ತೇರ್ಗಡೆಯಾಗಿ ಜೆಇಇಗೆ ತಯಾರಿ ನಡೆಸುತ್ತಿದ್ದಳು. ಈ ಪ್ರವೇಶ ಪರೀಕ್ಷೆಯಲ್ಲಿ ಈ ಬಾರಿ ತೇರ್ಗಡೆ ಹೊಂದುವ ಬಗ್ಗೆ ಆಕೆ ಅಪಾರ ಭರವಸೆ ಹೊಂದಿದ್ದಳು. ಆದರೆ ಆಕೆಯ ನಿರೀಕ್ಷೆ ಸು‍ಳ್ಳಾದ ಕಾರಣ ತೀವ್ರ ಖಿನ್ನತೆಗೊಳಗಾಗಿದ್ದಳು. ಹೀಗಾಗಿ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ಇನ್ನು ಸಾವಿಗೂ ಮುನ್ನ ಡೆತ್‌ ನೋಟ್‌ ಬರೆದಿಟ್ಟಿರುವ ಯುವತಿ, ನನ್ನನ್ನು ಕ್ಷಮಿಸಿ ಎಂದು ಬರೆದಿದ್ದಾಳೆ.ಇನ್ನು ಪೊಲೀಸರ ಪ್ರಕಾರ, ಈ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ ಪ್ರಾಣ ಕಳೆದುಕೊಳ್ಳುವುದಾಗಿ ಯುವತಿ ಈ ಹಿಂದೆ ತನ್ನ ತಾಯಿಗೆ ತಿಳಿಸಿದ್ದಳು. ಆಕೆಯ ತಂದೆ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಗೃಹಿಣಿ ಎನ್ನಲಾಗಿದೆ. ಬಾಲಕಿ ಛಾವಣಿಯಿಂದ ಜಿಗಿದಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಭಾರತೀಯ ನಾಗ್ರಿಕ್ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 194 ರ ಅಡಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಸೇರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Self Harming: ಗಂಡ ಕಪ್ಪೆಂದು ನೇಣಿಗೆ ಕೊರಳೊಡ್ಡಿದಳು ನವ ವಿವಾಹಿತೆ!