ಭೋಪಾಲ್: ನವರಾತ್ರಿಯ ದಿನ ವಿಶೇಷವಾಗಿ ದುರ್ಗಾ ದೇವಿಯ ಪೂಜೆ ಮಾಡಲಾಗುತ್ತದೆ. ಭಕ್ತರು ದೇವಿಯ ಆಶೀರ್ವಾದ ಪಡೆಯಲು ಹಲವು ಕಾರ್ಯಕ್ರಮಗಳನ್ನು ಆಚರಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ದುರ್ಗಾ ದೇವಿಯನ್ನು ಪ್ರಸನ್ನಗೊಳಿಸಲು ಆಕೆಗೆ ತನ್ನ ಶಿರ(ತಲೆ)ವನ್ನೇ (Self Harming) ಅರ್ಪಿಸಲು ಯತ್ನಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ದುರ್ಗಾ ದೇವಿಯ ಭಕ್ತನಾದ ರಾಜ್ ಕುಮಾರ್ ಯಾದವ್ ಎಂಬಾತ ಪನ್ನಾ ಜಿಲ್ಲೆಯ ದೇವಾಲಯದಲ್ಲಿ ದೇವರಿಗೆ ತನ್ನ ತಲೆಯನ್ನು ಅರ್ಪಿಸಲು ನಿರ್ಧರಿಸಿದ್ದ. ಅದಕ್ಕಾಗಿ ರೇಜರ್ನಿಂದ ಕತ್ತನ್ನು ಸೀಳಿಕೊಂಡಿದ್ದ ಎಂದು ವರದಿಯಾಗಿದೆ. ಆದರೆ ದೇವಾಲಯದಲ್ಲಿ ನೆರೆದಿದ್ದ ಇತರ ಭಕ್ತರು ಆತನನ್ನು ತಡೆದು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಸ್ತುತ, ಆತನ ಸ್ಥಿತಿ ಸ್ಥಿರವಾಗಿದೆ ಎಂಬುದಾಗಿ ತಿಳಿದುಬಂದಿದೆ. ಭಖುರಿ ಗ್ರಾಮದ ನಿವಾಸಿಯಾದ ರಾಜ್ ಕುಮಾರ್ ಯಾದವ್ ದೇವರ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿದ್ದ. ಈಗಾಗಲೇ ನವರಾತ್ರಿಯ ಒಂಬತ್ತು ದಿನಗಳ ಉಪವಾಸದಲ್ಲಿದ್ದ ಎಂದು ಹೇಳಲಾಗಿದೆ.
ಇದನ್ನೂ ಓದಿ:ಪ್ರಿಯಕರನೊಂದಿಗೆ ಚಕ್ಕಂದವಾಡುತ್ತಿದ್ದ ಪತ್ನಿಯನ್ನು ರೆಡ್ಹ್ಯಾಂಡ್ ಆಗಿ ಹಿಡಿದ ಪತಿ!
ಅಕ್ಟೋಬರ್ 11ರ ಶುಕ್ರವಾರ ಯಾದವ್ ಪನ್ನಾದ ಮಾ ಬಿಜಸೇನ್ ದೇವಸ್ಥಾನಕ್ಕೆ ಭೇಟಿ ನೀಡಿ ದೇವಾಲಯದ ಪೂಜಾರಿಗೆ ಶ್ರೀಫಲ ಮತ್ತು ಇತರ ಅರ್ಪಣೆಗಳನ್ನು ನೀಡಿದ್ದ. ನಂತರ, ಆತ ದೇವಾಲಯದ ಹಿಂಭಾಗಕ್ಕೆ ಭೇಟಿ ನೀಡಿ ರೇಜರ್ನಿಂದ ಕತ್ತು ಸೀಳಿಕೊಳ್ಳಲು ಪ್ರಯತ್ನಿಸಿದ್ದ. ಆತನ ಗಂಟಲಿನಿಂದ ರಕ್ತ ಸೋರುತ್ತಿರುವುದನ್ನು ನೋಡಿದ ಇತರ ಭಕ್ತರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಯಾದವ್ಗೆ ಶಸ್ತ್ರಚಿಕಿತ್ಸೆಗೆ ಮಾಡಲಾಗಿದ್ದು, ಈಗ ಆತನ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ ಆತ ಬಳಸಿದ್ದ ರೇಜರ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.