Thursday, 12th December 2024

ಪುದುಚೆರಿ ವಿಧಾನಸಭೆ: ಸ್ಪೀಕರ್ ಆಗಿ ಎಂಬಲಮ್ ಆರ್.ಸೆಲ್ವಂ ಆಯ್ಕೆ

ಪುದುಚೆರಿ: ಬಿಜೆಪಿಯ ಎಂಬಲಮ್ .ಆರ್ ಸೆಲ್ವಂ ಅವರು ಪುದುಚೆರಿ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಧಾನಸಭೆ ಸ್ಪೀಕರ್ ಚುನಾವಣೆಗೆ ಸೆಲ್ವಂ ಅವರೊಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರೊಟೆಮ್ ಸ್ಪೀಕರ್ ಕೆ. ಲಕ್ಷ್ಮಿ ನಾರಾಯಣ್ ಹೇಳಿದ್ದಾರೆ.

ಸೆಲ್ವಂ ಅವರನ್ನು ಮುಖ್ಯಮಂತ್ರಿ ಎನ್.ರಂಗಸಾಮಿ ಮತ್ತು ಪ್ರತಿಪಕ್ಷದ ನಾಯಕ ಆರ್ ಶಿವ ಸ್ಪೀಕರ್ ಸಭಾಪತಿ ಸ್ಥಾನದತ್ತ ಕರೆದೊಯ್ದರು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ 57 ವರ್ಷದ ಸೆಲ್ವಂ ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

ಪುದುಚೆರಿಯಲ್ಲಿ ಬಿಜೆಪಿ ಶಾಸಕರೊಬ್ಬರಿಗೆ ಅತ್ಯುನ್ನತ ಹುದ್ದೆ ದೊರೆತಿರುವುದು ಇದೇ ಮೊದಲು. 36 ವರ್ಷಗಳ ಕಾಲ ಪಕ್ಷಕ್ಕೆ ಸೇವೆ ಸಲ್ಲಿಸಿದರು. ನಂತರ ಬಿಜೆಪಿ ಸೇರ್ಪಡೆಯಾಗಿ ಪುದುಚೆರಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.