ನವದೆಹಲಿ: ಏರುಮುಖದಲ್ಲೇ ಸಾಗಿದ್ದ ಭಾರತೀಯ ಷೇರುಪೇಟೆ ಹೂಡಿಕೆದಾರರಿಗೆ ಮಂಗಳವಾರ ನಿರಾಸೆ ಮೂಡಿಸಿದೆ. ಸೆನ್ಸೆಕ್ಸ್ 19.69 ಪಾಯಿಂಟ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಇಳಿಕೆಗೊಂಡಿದೆ.
ಸೆನ್ಸೆಕ್ಸ್ 19.69 ಪಾಯಿಂಟ್ ಕುಸಿತ ಕಂಡಿದ್ದು, 51329.08 ರ ಮಟ್ಟದಲ್ಲಿ ಮುಚ್ಚಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 6.50 ಪಾಯಿಂಟ್‌ಗಳ ಕುಸಿತ ಕಂಡಿದ್ದು, 15109.30 ರ ಮಟ್ಟದಲ್ಲಿ ಮುಚ್ಚಿದೆ.
ಒಟ್ಟು 3,158 ಕಂಪನಿಗಳು ಬಿಎಸ್‌ಇಯಲ್ಲಿ ವಹಿವಾಟು ನಡೆಸಿದ್ದು, 1,656 ಷೇರುಗಳು ಕುಸಿದಿವು. 189 ಕಂಪನಿಗಳ ಷೇರು ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ.
7 ಪೈಸೆ ಸಹಾಯದಿಂದ ಡಾಲರ್ ಎದುರು ರೂಪಾಯಿ 92.89 ರೂಪಾಯಿಗೆ ಕೊನೆಗೊಂಡಿದೆ.