Saturday, 23rd November 2024

ಸೆನ್ಸೆಕ್ಸ್‌ 750 ಪಾಯಿಂಟ್ಸ್‌ ಏರಿಕೆ

ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಸೋಮವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 750 ಪಾಯಿಂಟ್ಸ್‌ ಏರಿಕೆಗೊಂಡು 50,000 ಗಡಿ ಸಮೀಪಿಸಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 749.85 ಪಾಯಿಂಟ್ಸ್‌ ಹೆಚ್ಚಾಗಿ 49,849.84 ಪಾಯಿಂಟ್ಸ್, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 232.30 ಪಾಯಿಂಟ್ಸ್ ಏರಿಕೆಗೊಂಡು 14,761.50 ಪಾಯಿಂಟ್ಸ್‌ ತಲುಪಿದೆ. 1,921 ಷೇರುಗಳು ಏರಿಕೆಗೊಂಡರೆ, 1,093 ಷೇರುಗಳು ಇಳಿಕೆ ಯಾಗಿವೆ, 189 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಪಿಎಸ್‌ಯು ಬ್ಯಾಂಕ್ ಸೂಚ್ಯಂಕ ಹೊರತುಪಡಿಸಿ, ನಿಫ್ಟಿ ಆಟೋ, ಎನರ್ಜಿ ಮತ್ತು ಮೆಟಲ್ ಸೂಚ್ಯಂಕಗಳು ತಲಾ 2 ಪ್ರತಿಶತ ದಷ್ಟು ಏರಿಕೆಯೊಂದಿಗೆ ಇತರ ಎಲ್ಲ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಆರಂಭಿಕ ನಷ್ಟವನ್ನು ಚೇತರಿಸಿಕೊಂಡರೂ ಪ್ರತಿ ಡಾಲರ್‌ಗೆ 73.55 ಕ್ಕೆ ತಲುಪಿದೆ. ಇದು ಹಿಂದಿನ 73.46 ರ ವಿರುದ್ಧ 31 ಪೈಸೆ ಕಡಿಮೆಯಾಗಿ 73.77 ಕ್ಕೆ ವಹಿವಾಟು ತೆರೆದು, 73.18-73.77 ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.