Sunday, 15th December 2024

ಸಮತಟ್ಟಾದ ವಹಿವಾಟು: ಅಲ್ಪ ಏರಿಕೆ ಕಂಡ ಸೆನ್ಸೆಕ್ಸ್

ಮುಂಬೈ: ಭಾರತೀಯ ಷೇರುಪೇಟೆ ಶುಕ್ರವಾರ ಸಮನಾದ ವಹಿವಾಟು ಆರಂಭಿಸಿದೆ. ಸೆನ್ಸೆಕ್ಸ್‌ 5.01 ಪಾಯಿಂಟ್ ಏರಿಕೆಗೊಂಡಿದೆ.

ಬಿಎಸ್‌ಇ ಸೆನ್ಸೆಕ್ಸ್‌ 5.01 ರಷ್ಟು 52237.44, ಮತ್ತು ನಿಫ್ಟಿ 0.90 ಪಾಯಿಂಟ್ ಏರಿಕೆ ಕಂಡು 15691.30 ಕ್ಕೆ ತಲುಪಿದೆ. ದಿನದ ವಹಿವಾಟು ಆರಂಭವಾದಾಗ 1242 ಷೇರುಗಳು ಏರಿಕೆಗೊಂಡರೆ, 335 ಷೇರುಗಳು ಕುಸಿದವು. 69 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಒಎನ್‌ಜಿಸಿಯ ಷೇರು 4 ರೂ.ಗಳ ಲಾಭದೊಂದಿಗೆ 126.00 ರೂ., ಮಹೀಂದ್ರಾ ಮತ್ತು ಮಹೀಂದ್ರಾ ಷೇರು 7 ರೂ.ಗಳ ಲಾಭ ದೊಂದಿಗೆ 809.35 ರೂ., ಲಾರ್ಸೆನ್‌ರ ಷೇರು 14 ರೂಗಳ ಏರಿಕೆಯೊಂದಿಗೆ 1,525.00 ರೂ., ಹೀರೋ ಮೊಟೊಕಾರ್ಪ್‌ನ ಷೇರು 17 ರೂ.ಗಳ ಏರಿಕೆ ಕಂಡು 3,025.45 ರೂ., ಟೈಟಾನ್ ಕಂಪನಿಯ ಷೇರು ಸುಮಾರು 8 ರೂ.ಗಳ ಲಾಭದೊಂದಿಗೆ 1,699.30 ರೂ.ಗೆ ಪ್ರಾರಂಭವಾಯಿತು.