Thursday, 12th December 2024

ಆರಂಭದಲ್ಲೇ ಲಾಭ ಪಡೆದ ಸೆನ್ಸೆಕ್ಸ್, ಎನ್‌ಎಸ್‌ಸಿ 74.40 ಪಾಯಿಂಟ್‌ ಲಾಭ

ಮುಂಬೈ/ನವದೆಹಲಿ: ಮಂಗಳವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 213.34 ಪಾಯಿಂಟ್‌ ಏರಿಕೆಗೊಂಡು, ರಾಷ್ಟ್ರೀಯ ಷೇರುಪೇಟೆ 74.40 ಪಾಯಿಂಟ್‌ಗಳ ಲಾಭದೊಂದಿಗೆ ತೆರೆದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 50608.42 ಮಟ್ಟದಲ್ಲಿ ಪ್ರಾರಂಭವಾಯಿತು. ಎನ್‌ಎಸ್‌ಇ ನಿಫ್ಟಿ 15003.90 ಮಟ್ಟದಲ್ಲಿ ತೆರೆಯಿತು.

ಬಿಎಸ್‌ಇಯಲ್ಲಿ ಒಟ್ಟು 959 ಕಂಪನಿಗಳಲ್ಲಿ ವಹಿವಾಟು ಪ್ರಾರಂಭಿಸಿತು, ಅದರಲ್ಲಿ ಸುಮಾರು 668 ಷೇರುಗಳು ಏರಿಕೆಗೊಂಡರೆ, 234 ಷೇರುಗಳು ಇಳಿಕೆಗೊಂಡಿವೆ. ಅದೇ ಸಮಯದಲ್ಲಿ, 57 ಕಂಪನಿಗಳ ಷೇರು ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸೆನ್ಸೆಕ್ಸ್ 458 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 118 ಪಾಯಿಂಟ್ಸ್ ಹೆಚ್ಚಳಗೊಂಡಿದೆ.

ಅದಾನಿ ಪೋರ್ಟ್ಸ್‌ ಷೇರುಗಳು 12 ರೂ.ಗಳ ಏರಿಕೆ ಕಂಡು 731.50 ರೂ., ಅಲ್ಟ್ರಾಟೆಕ್ ಸಿಮೆಂಟ್‌ನ ಷೇರುಗಳು 98 ರೂ.ಗಳಿಂದ 6,659.90 ರೂ., ಟೈಟಾನ್ ಕಂಪನಿಯ ಷೇರುಗಳು 1,515.85 ರೂ.ಗಳಲ್ಲಿ ಪ್ರಾರಂಭವಾಗಿದ್ದು, ಏಷ್ಯನ್ ಪೇಂಟ್ಸ್ ಷೇರುಗಳು 35 ರೂ.ಗಳಿಂದ 2,389.55 ರೂ., ಭಾರ್ತಿ ಏರ್‌ಟೆಲ್‌ನ ಷೇರು ಸುಮಾರು 6 ರೂ ಗಳಿಸಿ 529.25 ರೂ.ಗೆ ತೆರೆಯಿತು.