Thursday, 12th December 2024

ಸೆನ್ಸೆಕ್ಸ್ ಸೂಚ್ಯಂಕ 270 ಅಂಕ ಏರಿಕೆ

ಮುಂಬೈ: ಗುರುವಾರ ಹೂಡಿಕೆದಾರರು ಆರಂಭಿಕ ವಹಿವಾಟಿನಲ್ಲಿ ಷೇರು ಖರೀದಿಗೆ ಉತ್ಸಾಹ ತೋರಿದ್ದು, ಸೆನ್ಸೆಕ್ಸ್ ಸೂಚ್ಯಂಕ 270 ಅಂಕ ಏರಿಕೆ ಕಂಡಿದೆ.

ಹೂಡಿಕೆದಾರರ ಖರೀದಿಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ ಮತ್ತು ಐಸಿಐಸಿಐ ಬ್ಯಾಂಕ್ ಗಳ ಷೇರು ಮಾರಾಟ ದಲ್ಲಿ ಚೇತರಿಕೆ ಕಂಡು ಬಂದಿರುವುದಾಗಿ ತಿಳಿಸಿದೆ.

ಬಾಂಬೆ ಷೇರುಪೇಟೆ ಸೂಚ್ಯಂಕ (ಬಿಎಸ್ ಇ) 270.69 ಅಂಕಗಳಷ್ಟು ಏರಿಕೆ ಕಂಡಿದ್ದು, 48,444.75 ಅಂಕಗಳಷ್ಟು ವಹಿವಾಟು ನಡೆಸಿದೆ. ನಿಫ್ಟಿ ಸೂಚ್ಯಂಕ 80.95 ಅಂಕಗಳಷ್ಟು ಏರಿಕೆಯಾಗಿದ್ದು, 14,227.20 ಅಂಕಗಳ ವಹಿವಾಟು ದಾಖಲಿಸಿದೆ.

‌10 ದಿನಗಳ ಷೇರುಪೇಟೆಯ ನಾಗಾಲೋಟಕ್ಕೆ ಬುಧವಾರ ಬ್ರೇಕ್‌ ಬಿದ್ದಿದೆ. ಜಾಗತಿಕ ಬೆಳವಣಿಗೆಗಳು ಮುಂಬೈ ಷೇರುಪೇಟೆಯ ಮೇಲೆ ಪರಿಣಾಮ ಬೀರಿದ್ದು, ಹೂಡಿಕೆದಾರರು ರಿಲಯನ್ಸ್‌ ಇಂಡಸ್ಟ್ರೀಸ್‌, ಐಟಿ, ಹಣಕಾಸು, ಎಫ್‌ಎಂಸಿಜಿ ಷೇರುಗಳ ಮಾರಾಟ ದಲ್ಲಿ ತೊಡಗಿದ ಕಾರಣ ಬಿಎಸ್‌ಇ ಸೆನ್ಸೆಕ್ಸ್‌ 263.72 ಅಂಕಗಳ ಕುಸಿತ ದಾಖಲಿಸಿ, 48,174ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.