Thursday, 12th December 2024

91.84 ಪಾಯಿಂಟ್ ಏರಿಕೆ ಕಂಡ ಸೆನ್ಸೆಕ್ಸ್

ನವದೆಹಲಿ: ಭಾರತೀಯ ಷೇರುಪೇಟೆಯು ಸತತ ಏರಿಕೆ ದಾಖಲಿಸಿದ್ದು, ಏರಿಳಿತ ಸಾಧಿಸಿದೆ. ಮುಂಬೈ ಷೇರು ಪೇಟೆ ಸೆನ್ಸೆಕ್ಸ್ 91.84 ಪಾಯಿಂಟ್ ಏರಿಕೆ ಕಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 30.70 ಪಾಯಿಂಟ್ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 91.84 ಪಾಯಿಂಟ್ ಅಥವಾ ಶೇಕಡಾ 0.19ರಷ್ಟು ಏರಿಕೆಗೊಂಡು 49,584.16 ಪಾಯಿಂಟ್ಸ್‌ ಮುಟ್ಟಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 30.70 ಪಾಯಿಂಟ್ ಅಥವಾ ಶೇಕಡಾ 0.21ರಷ್ಟು ಹೆಚ್ಚಳಗೊಂಡು 14,595.60 ಕ್ಕೆ ತಲುಪಿದೆ.

ಇಂದು ಸುಮಾರು 1467 ಷೇರುಗಳು ಏರಿಕೆ ಸಾಧಿಸಿದರೆ, 1489 ಷೇರುಗಳು ಕುಸಿದವು ಮತ್ತು 166 ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಿಫ್ಟಿಯಲ್ಲಿ ಯುಪಿಎಲ್, ಬಿಪಿಸಿಎಲ್, ಟಿಸಿಎಸ್, ಇಂಡಸ್‌ಇಂಡ್ ಮತ್ತು ಐಒಸಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಎಚ್‌ಸಿಎಲ್ ಟೆಕ್, ಜೆಎಸ್‌ಡಬ್ಲ್ಯೂ ಸ್ಟೀಲ್, ಆಕ್ಸಿಸ್ ಬ್ಯಾಂಕ್, ಟೆಕ್ ಮಹೀಂದ್ರಾ ಮತ್ತು ಏಷ್ಯನ್ ಪೇಂಟ್ಸ್ ನಷ್ಟ ಅನುಭವಿಸಿದ ಷೇರುಗಳಾಗಿವೆ.

ಲೋಹದ ಸೂಚ್ಯಂಕವು 1 ಪ್ರತಿಶತ ಕಳೆದುಕೊಂಡಿದ್ದರೆ ಪವರ್, ಆಟೋ, ಎಫ್‌ಎಂಸಿಜಿ ಮತ್ತು ಫಾರ್ಮಾ ಖರೀದಿಗೆ ಜನರು ಮುಗಿಬಿದ್ದಿದ್ದರು. ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಚಂಚಲದ ವಹಿವಾಟಿನ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ 11 ಪೈಸೆ ಏರಿಕೆಗೊಡು ಪ್ರತಿ ಡಾಲರ್‌ಗೆ 73.04 ಕ್ಕೆ ತಲುಪಿದೆ.

ಇದು ಹಿಂದಿನ 73.15 ರ ಸಮೀಪಕ್ಕೆ ಹೋಲಿಸಿದರೆ ಪ್ರತಿ ಡಾಲರ್‌ಗೆ 73.19 ಕ್ಕೆ ಸ್ವಲ್ಪ ಕಡಿಮೆಯಾಗಿದೆ ಮತ್ತು 72.93-73.18 ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.