Sunday, 15th December 2024

ಷೇರುಪೇಟೆಯಲ್ಲಿ ಗೂಳಿ ಓಟ ಜೋರು: ಸೆನ್ಸೆಕ್ಸ್ 358 ಪಾಯಿಂಟ್ಸ್‌ ಏರಿಕೆ

ನವದೆಹಲಿ: ಭಾರತೀಯ ಷೇರುಪೇಟೆಯಲ್ಲಿ ಗೂಳಿ ಓಟ ಜೋರಾಗಿದೆ. ಗುರುವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ದಾಖಲೆಯ ಮಟ್ಟ ತಲುಪಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 358 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 105 ಪಾಯಿಂಟ್ಸ್ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 358.54 ಪಾಯಿಂಟ್ಸ್ ಹೆಚ್ಚಳಗೊಂಡು 50614.29 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 105.70 ಪಾಯಿಂಟ್ಸ್ ಏರಿಕೆಗೊಂಡು 14895.70 ಪಾಯಿಂಟ್ಸ್‌ ದಾಖಲಾಗಿದೆ.

1813 ಷೇರುಗಳು ಏರಿಕೆಗೊಂಡರೆ, 1110 ಷೇರುಗಳು ಇಳಿಕೆಗೊಂಡಿವೆ ಮತ್ತು 142 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಐಟಿ ಹೊರತುಪಡಿಸಿ ಉಳಿದೆಲ್ಲ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕ ಗಳು ತಲಾ 1 ಪ್ರತಿಶತಕ್ಕಿಂತ ಹೆಚ್ಚಾಗಿದೆ.