Sunday, 15th December 2024

ಸಾರ್ವಕಾಲಿಕ ಏರಿಕೆ ದಾಖಲಿಸಿದ ಸೆನ್ಸೆಕ್ಸ್, ನಿಫ್ಟಿ

ಮುಂಬೈ: ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆದಿದ್ದು, ಜೂ.4ರ ನಾಳೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಬಹುತೇಕ ಅಂದು ಸಂಜೆಯೇ ಹೊರಬೀಳಲಿದೆ.

ಮತದಾನ ಪೂರ್ಣಗೊಂಡ ದಿನ ಶನಿವಾರ ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಹೇಳಲಾಗಿದೆ.

ಇದರ ಪರಿಣಾಮ ಷೇರು ಮಾರುಕಟ್ಟೆಯ ಮೇಲೆ ಆಗಿದ್ದು, ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಏರಿಕೆ ದಾಖಲಿಸಿವೆ. ಸೋಮವಾರ ವಹಿವಾಟು ಆರಂಭವಾಗುತ್ತಲೇ ಮೂವತ್ತು ಷೇರುಗಳ ಸೆನ್ಸೆಕ್ಸ್ ಮತ್ತು 50 ಷೇರುಗಳ ನಿಫ್ಟಿಯ ಎಲ್ಲ ಷೇರುಗಳು ಗಳಿಕೆ ಕಂಡಿವೆ.