Saturday, 23rd November 2024

ಸೀರಮ್ ಇನ್ಸ್ಟಿಟ್ಯೂಟ್‌ ಘಟನೆ: ಐವರು ಕಾರ್ಮಿಕರ ಸಾವು

ಪುಣೆ: ಕೋವಿಶೀಲ್ಡ್ ಕೊರೊನಾ ಲಸಿಕೆ ತಯಾರಿಕೆ ಮತ್ತು ವಿತರಣೆಯ ಹೊಣೆ ಹೊತ್ತಿರುವ ಸೀರಮ್ ಇನ್ಸ್ಟಿಟ್ಯೂಟ್‌ನ  ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಬೆಂಕಿ ತಗುಲಿದ್ದು, ಇತ್ತೀಚಿನ ವರದಿ ಪ್ರಕಾರ, ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಕಟ್ಟಡದ ಮೂರು, ನಾಲ್ಕು ಮತ್ತು ಐದನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೇ ಸೀರಮ್ ಇನ್ಸ್ಟಿಟ್ಯೂಟ್ ಆವರಣಕ್ಕೆ ಪ್ರವೇಶಿಸಿರುವ ಅಗ್ನಿಶಾಮಕ ದಳ, ಬೆಂಕಿ ನಂದಿಸುವ ಕಾರ್ಯುದಲ್ಲಿ ನಿರತವಾಗಿದೆ.

ನಿರ್ಮಾಣ ಹಂತದ ಕಟ್ಟಡವು ಕೋವಿಶೀಲ್ಡ್ ಉತ್ಪಾದನೆಯ ಘಟಕದ ಪಕ್ಕದಲ್ಲೇ ಇದೆ. ವಿಶೇಷ ಆರ್ಥಿಕ ವಲಯದ ನೂತನ ಕಟ್ಟಡದ ಕೆಲವು ಮಹಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೋವಿಶೀಲ್ಡ್ ಲಸಿಕೆ ತಯಾರಾ ಗುತ್ತಿರುವ ಘಟಕಗಳು ಮತ್ತು ಸಂಗ್ರಹಾಲಯ ಸುರಕ್ಷಿತವಾಗಿದೆ. ಲಸಿಕೆ ತಯಾರಿಕೆ ಹಾಗೂ ವಿತರಣೆ ಪ್ರಕ್ರಿಯೆಗೆ ಇದರಿಂದ ತೊಂದರೆಯಿಲ್ಲ ಎಂದು ಸಂಸ್ಥೆ ಹೇಳಿದೆ.