ನವದೆಹಲಿ: ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ನಿನ್ನೆ ತಡರಾತ್ರಿ ಭಾರೀ ಆಘಾತ ಕಾದಿತ್ತು. ರಾತ್ರಿ ಸುಮಾರು 11 ಗಂಟೆಯಿಂದ ಮೆಟಾ ಸರ್ವರ್ ಡೌನ್(Server Outrage) ಆದ ಹಿನ್ನೆಲೆಯಲ್ಲಿ WhatsApp, Instagram, Facebook ಅಪ್ಲಿಕೇಷನ್ಗಳು ಕೆಲಸ ಸ್ಥಗಿತಗೊಳಿಸಿದ್ದವು. ಇದರಿಂದ ಬಳಕೆದಾರರು ಕರೆ, ಸಂದೇಶಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲಾಗದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಇನ್ನು ಪ್ರಪಂಚದಾದ್ಯಂತ ಬಳಕೆದಾರರು ಈ ಸಮಸ್ಯೆ ಎದುರಿಸಿದ್ದು, ಹಲವು ಗಂಟೆಗಳ ನಂತರ ಇದೀಗ ಎಲ್ಲಾ ಆಪ್‌ಗಳು ಕಾರ್ಯ ನಿರ್ವಹಿಸುತ್ತಿವೆ ಎನ್ನಲಾಗಿದೆ. ಕೋಟ್ಯಾಂತರ ಜನರು ಯಾವುದೇ ಸಂದೇಶಗಳನ್ನು ಕಳುಹಿಸಲಾಗದೇ ಪೇಚಿಗೆ ಸಿಲುಕಿದ್ದರು. WhatsApp ಇನ್ನೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಜನ ದೂರುತ್ತಿದ್ದಾರೆ. ಇನ್ನು ವಾಟ್ಸ್‌ಆಪ್ ಬಳಕೆದಾರರೇ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ರಾತ್ರಿ 11 ಗಂಟೆಗೆ 20 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ. ಇನ್‌ಸ್ಟಾಗ್ರಾಮ್ ವಿರುದ್ಧ ಸುಮಾರು 15 ಸಾವಿರ, ಹಾಗೂ ಫೇಸ್‌ಬುಕ್ ಬಗ್ಗೆ 2.5 ಸಾವಿರ ದೂರುಗಳು ದಾಖಲಾಗಿವೆ ಎಂದು ವರದಿಯೊಂದು ತಿಳಿಸಿದೆ.
Thanks for bearing with us! We’re 99% of the way there – just doing some last checks. We apologize to those who’ve been affected by the outage.
— Meta (@Meta) December 11, 2024
ಕ್ಷಮೆಯಾಚಿಸಿದ ಮೆಟಾ
ಇನ್ನು ನಿನ್ನೆ ರಾತ್ರಿ ಉಂಟಾದ ತಾಂತ್ರಿಕ ಸಮಸ್ಯೆ ಬಗ್ಗೆ ಮೆಟಾ ತನ್ನ ಬಳಕೆದಾರರಲ್ಲಿ ಕ್ಷಮೆಯಾಚಿಸಿದೆ. ನಮ್ಮ ಅಪ್ಲಿಕೇಶನ್‌ಗಳನ್ನು ಬಳಸುವ ಕೆಲವು ಬಳಕೆದಾರರು ತಾಂತ್ರಿಕ ಸಮಸ್ಯೆ ಎದುರಿಸಿದ್ದಾರೆ ಎಂದು ನಮಗೆ ತಿಳಿದಿದೆ. ನಾವು ಸಾಧ್ಯವಾದಷ್ಟು ಬೇಗ ವಿಷಯಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಕೆಲಸ ಮಾಡುತ್ತಿದ್ದೇವೆ ಮತ್ತು ಯಾವುದೇ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ. ನಮ್ಮೊಂದಿಗೆ ಸಹಕರಿಸಿದ್ದಕ್ಕಾಗಿ ಧನ್ಯವಾದಗಳು! ನಾವು 99% ನಷ್ಟು ಸಫಲರಾಗಿದ್ದೇವೆ. ಕೆಲವು ಕೊನೆಯ ಹಂತ ತಪಾಸಣೆಗಳನ್ನು ಮಾಡುತ್ತಿದ್ದೇವೆ. ಸ್ಥಗಿತದಿಂದ ತೊಂದರೆಗೊಳಗಾದವರಿಗೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಮೆಟಾ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದೆ.
ಈ ಸುದ್ದಿಯನ್ನೂ ಓದಿ:400 ವರ್ಷಗಳ ಹಿಂದೆ ಮುಳುಗಿದ್ದ ವಾಣಿಜ್ಯ ಹಡಗಿಗಾಗಿ ಶೋಧ ಆರಂಭ