Wednesday, 11th December 2024

ಸಂಸತ್‍ನಲ್ಲಿ ನಡೆಯದ ಕಲಾಪ: ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ

ನವದೆಹಲಿ: ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷ ಗಳು ಸಂಸತ್‍ನಲ್ಲಿ ಗದ್ದಲ ಎಬ್ಬಿಸಿದ್ದ ರಿಂದ ಕಲಾಪ ಮುಂದೂಡಿಕೆಯಾಯಿತು.

ಲೋಕಸಭೆಯಲ್ಲಿ ಪ್ರತಿಪಕ್ಷಗಳು ತೆರಿಗೆ ಏರಿಕೆ ಮತ್ತು ಹಣದುಬ್ಬರ ಹೆಚ್ಚಳ ವಿರೋಧಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದರಿಂದಾಗಿ ಮಧ್ಯಾಹ್ನ ಕಲಾಪ ಮುಂದೂಡ ಲಾಯಿತು.

ಮತ್ತೆ ಸದನ ಸಮಾವೇಶಗೊಂಡಾಗಲೂ ಗದ್ದಲ ಮುಂದುವರೆದಿದ್ದರಿಂದ ಮಧ್ಯಾಹ್ನ ಕಲಾಪ ಮುಂದೂಡಲಾಗಿದೆ. ಇತ್ತ ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳ ಪ್ರತಿರೋಧ ತೀವ್ರ ವಾಗಿದ್ದು, ಬೆಲೆ ಏರಿಕೆ ಮತ್ತು ಜಿಎಸ್‍ಟಿ ವಿಧಿಸಿರುವುದರ ವಿರುದ್ಧ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿವೆ.

ಸಭಾಪತಿ ಎಂ.ವೆಂಕಯ್ಯನಾಯ್ಡು ಸೂಚನೆ ಮೇರೆಗೆ ಹಲವು ಸದಸ್ಯರು ಕಾಗದ ಪತ್ರ ಗಳನ್ನು ಮಂಡಿಸಿದರು. ಉತ್ತರ ಪ್ರದೇಶದಿಂದ ಪಕ್ಷೇತರರಾಗಿ ಆಯ್ಕೆಯಾಗಿರುವ ಕಪಿಲ್‍ ಸಿಬಾಲ್ ಪ್ರಮಾಣ ವಚನ ಸ್ವೀಕರಿಸಿದರು. ಪ್ರತಿಪಕ್ಷಗಳ ಶಾಸಕರು ಪ್ಲೇ ಕಾರ್ಡ್‍ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರಿಂದಾಗಿ ಗದ್ದಲದ ವಾತಾವರಣ ನಿರ್ಮಾಣ ವಾಯಿತು.

ಸಂಸತ್ ಅಧಿವೇಶನದಲ್ಲಿ ಸಣ್ಣಪುಟ್ಟ ಪ್ರಶ್ನೋತ್ತರಗಳನ್ನು ಹೊರತುಪಡಿಸಿ ಪ್ರಮುಖ ಕಲಾಪಗಳು ನಡೆಯುತ್ತಿಲ್ಲ. ಕೇಂದ್ರ ಸಚಿವರು ಗದ್ದಲದ ನಡುವೆಯೇ ಹಲವು ಮಸೂದೆಗಳನ್ನು ಮಂಡಿಸಿದ್ದಾರೆ.