Friday, 22nd November 2024

ಜುಲೈ ಮೂರನೇ ವಾರದಲ್ಲಿ ಮುಂಗಾರು ಅಧಿವೇಶನ: ಹೊಸ ಕಟ್ಟಡಕ್ಕೆ ಸ್ಥಳಾಂತರ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ ಮೂರನೇ ವಾರದಲ್ಲಿ ಪ್ರಾರಂಭ ವಾಗುವ ಸಾಧ್ಯತೆಯಿದೆ, ಅಧಿವೇಶನ ಗಳು ಹಳೆಯ ಸಂಸತ್ ಭವನದಲ್ಲಿ ಪ್ರಾರಂಭವಾಗಿ ಮಧ್ಯದಲ್ಲಿ ಹೊಸ ಸಂಸತ್ತು ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿವೆ ಎಂದು ಸಂಸತ್ತಿನ ಮೂಲಗಳು ತಿಳಿಸಿವೆ.

ಮೇ 28ರಂದು ನೂತನ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಒಂದು ತಿಂಗಳ ಅವಧಿಯ ಮುಂಗಾರು ಅಧಿವೇಶನವು 20 ಕಾರ್ಯಕಲಾಪಗಳನ್ನು ನಡೆಸುವ ಸಾಧ್ಯತೆಯಿದೆ. ಸ್ವಾತಂತ್ರ್ಯ ದಿನಾಚರಣೆಯ ಮೊದಲು ಮುಕ್ತಾಯ ಗೊಳ್ಳಲಿದೆ. ಹಳೆಯ ಸಂಸತ್ ಭವನದಲ್ಲಿ ಅಧಿವೇಶನ ಆರಂಭವಾಗಲಿದ್ದು, ನಂತರ ಹೊಸ ಸಂಸತ್ತಿಗೆ ತೆರಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿವೇಶನದಲ್ಲಿ, ಸರ್ಕಾರವು ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದುಗೊಳಿಸಿದ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಸುಗ್ರೀವಾಜ್ಞೆಗೆ ಬದಲಾಗಿ ಮಸೂದೆಯನ್ನು ತಂದು ಶೀಘ್ರವಾಗಿ ಅಂಗೀಕರಿಸಲು ಸರ್ಕಾರ ಪ್ರಯತ್ನಿಸಲಿದೆ.