Thursday, 12th December 2024

ಅ.15ರಂದು 7 ಹೊಸ ರಕ್ಷಣಾ ಕಂಪನಿಗಳ ರಾಷ್ಟ್ರಕ್ಕೆ ಸಮರ್ಪಣೆ

ನವದೆಹಲಿ: ವಿಜಯದಶಮಿ ದಿನದ ಸಂದರ್ಭ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅ.15ರಂದು ಮಧ್ಯಾಹ್ನ ರಕ್ಷಣಾ ಸಚಿವಾಲಯ ಆಯೋಜಿಸಿರುವ 7 ಹೊಸ ರಕ್ಷಣಾ ಕಂಪನಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮ ಉದ್ದೇಶಿಸಿ ವಿಡಿಯೊ ಭಾಷಣ ಮಾಡಲಿದ್ದಾರೆ.

ರಕ್ಷಣಾ ಸಚಿವರು, ರಕ್ಷಣಾ ಖಾತೆ ಸಹಾಯಕ ಸಚಿವರು ಮತ್ತು ರಕ್ಷಣಾ ಉದ್ಯಮದ ಸಂಸ್ಥೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

ದೇಶದ ರಕ್ಷಣಾ ಸನ್ನದ್ಧತೆಯಲ್ಲಿ ಸ್ವಾವಲಂಬನೆ ಕ್ರಮವಾಗಿ ಸರ್ಕಾರಿ ಇಲಾಖೆಯಿಂದ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿಯನ್ನು ಶೇ.100ರಷ್ಟು ಸರ್ಕಾರಿ ಒಡೆತನದ 7 ಕಾರ್ಪೊರೇಟ್ ಸಂಸ್ಥೆಗಳನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಈ ಕ್ರಮವು ದಕ್ಷತೆಯನ್ನು ತರುತ್ತದೆ ಮತ್ತು ಹೊಸ ಬೆಳವಣಿಗೆಯ ಸಾಮರ್ಥ್ಯ ಮತ್ತು ನಾವೀನತ್ಯೆಯನ್ನು ಹುಟ್ಟು ಹಾಕುತ್ತದೆ.

7 ಹೊಸ ರಕ್ಷಣಾ ಕಂಪನಿಗಳೆಂದರೆ; ಮುನಿಷನ್ಸ್ ಇಂಡಿಯಾ ಲಿಮಿಟೆಡ್ (ಎಂಐಎಲ್); ಆರ್ಮೊರ್ಡ್ ವೆಹಿಕಲ್ಸ್(ಶಸ್ತ್ರ ಸಜ್ಜಿತ ವಾಹನಗಳು) ನಿಗಮ ಲಿಮಿಟೆಡ್ (ಎವಿಎಎನ್ ಐ); ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಎಕ್ಯೂಪ್ ಮೆಂಟ್ ಇಂಡಿಯಾ ಲಿಮಿಟೆಡ್(ಎಡಬ್ಲ್ಯೂಇ ಇಂಡಿಯಾ); ಟ್ರೂಪ್ ಕಂಫರ್ಟ್ಸ್ ಲಿಮಿಟೆಡ್(ಟಿಸಿಎಲ್); ಯಂತ್ರ ಇಂಡಿಯಾ ಲಿಮಿಟೆಡ್ (ವೈಐಎಲ್); ಇಂಡಿಯಾ ಒಪ್ಟೆಲ್ ಲಿಮಿಟೆಡ್(ಐಒಎಲ್ ) ಮತ್ತು ಗ್ಲೈಡರ್ಸ್ ಇಂಡಿಯಾ ಲಿಮಿಟೆಡ್(ಜಿಐಎಲ್)

ಸೂರತ್‌ನಲ್ಲಿ ಸೌರಾಷ್ಟ್ರ ಪಟೇಲ್ ಸೇವಾ ಸಮಾಜದ ವಸತಿ ನಿಲಯ ಹಂತ – 1 ರ ಕಟ್ಟಡಕ್ಕೆ ಭೂಮಿ ಪೂಜೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ  ನೆರವೇರಿಸಲಿದ್ದಾರೆ. ಸೌರಾಷ್ಟ್ರ ಪಟೇಲ್ ಸೇವಾ ಸಮಾಜದ ವಸತಿ ನಿಲಯ ಹಂತ – 1 ರ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದೆ. ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಸಹ ಪಾಲ್ಗೊಳ್ಳಲಿದ್ದಾರೆ.

ಸಮಾಜದಲ್ಲಿನ ದುರ್ಬಲ ವರ್ಗಗಳಿಗೆ ಶಿಕ್ಷಣ ಮತ್ತು ಸಮಾಜಿಕ ಪರಿವರ್ತನೆ ತರುವ ಉದ್ದೇಶದಿಂದ 1983 ರಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದ್ದು, ವಿದ್ಯಾರ್ಥಿಗಳನ್ನು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ಇಲ್ಲಿ ನೆರವು ದೊರೆಯುತ್ತಿದೆ ಮತ್ತು ಕೌಶಲ್ಯ ಅಭಿವೃದ್ಧಿ ಪಡೆಯಲು ಮತ್ತು ಉದ್ಯಮಶೀಲರಾಗಲು ಸಹ ಇದು ವೇದಿಕೆಯಾಗಿದೆ.