Thursday, 14th November 2024

Kerala High Court : ಅಪ್ರಾಪ್ತ ವಯಸ್ಸಿನವರ ಎದುರು ಲೈಂಗಿಕ ಕ್ರಿಯೆ ನಡೆಸುವುದು ಲೈಂಗಿಕ ಕಿರುಕುಳ ಎಂದ ಹೈಕೋರ್ಟ್‌

Kerala High Court

ಕೋಲ್ಕತಾ: ಅಪ್ರಾಪ್ತ ವಯಸ್ಕರ ಮುಂದೆ ಲೈಂಗಿಕ ಕ್ರಿಯೆ ನಡೆಸುವುದು ಅಥವಾ ಬಟ್ಟೆ ಬದಲಾಯಿಸುವಾಗ ನಗ್ನ ದೇಹ ಪ್ರದರ್ಶಿಸುವುದು ಮಗುವಿನ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಮಾನ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (pocso) ಕಾಯ್ದೆಯಡಿ ಶಿಕ್ಷಾರ್ಹ ಎಂದು ಕೇರಳ ಹೈಕೋರ್ಟ್ (Kerala High Court) ಅಭಿಪ್ರಾಯಪಟ್ಟಿದೆ. ಐಪಿಸಿ, ಪೋಕ್ಸೊ ಕಾಯ್ದೆ ಮತ್ತು ಬಾಲನ್ಯಾಯ ಕಾಯ್ದೆಯಡಿ ವಿವಿಧ ಅಪರಾಧಗಳಿಗಾಗಿ ತನ್ನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮನವಿಯ ಮೇರೆಗೆ ನ್ಯಾಯಮೂರ್ತಿ ಎ ಬದರುದ್ದೀನ್ ಈ ತೀರ್ಪು ನೀಡಿದ್ದಾರೆ.

ಅರ್ಜಿದಾರಅಪ್ರಾಪ್ತ ವಯಸ್ಸಿನ ಬಾಲಕನ ತಾಯಿಯೊಂದಿಗೆ ಕೋಣೆಗೆ ಬೀಗ ಹಾಕದೆ ಲಾಡ್ಜ್‌ನಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದ. ನಂತರ ತಮ್ಮ ಕೃತ್ಯವನ್ನು ನೋಡಿದ ಬಾಲಕನಿಗೆ ಥಳಿಸಿದ್ದ. ಹೀಗಾಗಿ ಆತನ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಒಬ್ಬ ವ್ಯಕ್ತಿಯು ಮಗುವಿಗೆ ತನ್ನ ನಗ್ನ ದೇಹವನ್ನು ಪ್ರದರ್ಶಿಸುವುದು ಅದು ಮಗುವಿನ ಮೇಲೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದ ಕೃತ್ಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪೋಕ್ಸೊ ಕಾಯ್ದೆಯ ಸೆಕ್ಷನ್ 11 (ಐ) (ಲೈಂಗಿಕ ಕಿರುಕುಳ) ಮತ್ತು 12 (ಲೈಂಗಿಕ ಕಿರುಕುಳಕ್ಕೆ ಶಿಕ್ಷೆ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ, ಆರೋಪಿಗಳು ಬೆತ್ತಲೆಯಾದ ನಂತರ ಕೋಣೆಗೆ ಬೀಗ ಹಾಕದೆಯೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಅಪ್ರಾಪ್ತ ವಯಸ್ಕ ನೇರವಾಗಿ ಕೋಣೆಯೊಳಗೆ ಪ್ರವೇಶಿಸುವಂತೆ ಮಾಡಿರುವುದು ತಪ್ಪು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 11 (ಐ) ಮತ್ತು 12 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧದ ಆರೋಪ ಸಾಬೀತಾಗಿದೆ ” ಎಂದು ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ: Indian Railways : ಮತ್ತೊಂದು ರೈಲು ಅಪಘಾತ; ಹಳಿ ತಪ್ಪಿದ ಅಗರ್ತಲಾ- ಮುಂಬೈ ಎಕ್ಸ್‌ಪ್ರೆಸ್

ಆರೋಪಿ ಮಗುವನ್ನು ಥಳಿಸಿದ್ದಾನೆ ಮತ್ತು ಅಪ್ರಾಪ್ತೆಯ ತಾಯಿ ಅದನ್ನು ತಡೆಯಲು ಪ್ರಯತ್ನಿಸದ ಕಾರಣ, ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವನ್ನುಂಟುಮಾಡುವ ಶಿಕ್ಷೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಅಪರಾಧಗಳೂ ನಡೆದಿವೆ ಎಂದು ಕೋರ್ಟ್ ಹೇಳಿದೆ. ಪೋಕ್ಸೊ ಕಾಯ್ದೆ ಮತ್ತು ಐಪಿಸಿಯ ಸೆಕ್ಷನ್ 323 ಮತ್ತು 34 ರ ಅಡಿಯಲ್ಲಿ ಅಪರಾಧಗಳಿಗಾಗಿ ವ್ಯಕ್ತಿ ವಿಚಾರಣೆ ಎದುರಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.