Saturday, 14th December 2024

ಅಸ್ಸಾಂ ಪ್ರವಾಸ: ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿದ ಶಾ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಅಸ್ಸಾಂ ಪ್ರವಾಸ ಕೈಗೊಂಡಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜೊತೆಗೂಡಿ ಮಂಕಚಾರ್ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಇದೇ ವೇಳೆ ಅನೇಕ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸ ಲಿದ್ದಾರೆ.

ಶಾ ಅವರು ಮಂಕಚಾರ್ ವಲಯಕ್ಕೆ ಆಗಮಿಸಿ ಅಸ್ಸಾಂ-ಬಾಂಗ್ಲಾದೇಶ ಗಡಿಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಗೃಹ ಸಚಿವರು ಬಿಎಸ್‌ಎಫ್ ಅಧಿಕಾರಿಗಳೊಂದಿಗೆ ವೀಕ್ಷಣಾ ಗೋಪುರದಿಂದ ಗಡಿಯಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅಸ್ಸಾಂ ಪ್ರವಾಸದಲ್ಲಿರುವ ಸಚಿವರು, ಬಿಎಸ್‌ಎಫ್ ಯೋಧ #ರೊಂದಿಗೆ ಸಂವಾದ ನಡೆಸಲಿದ್ದಾರೆ.

ಒಳನುಸುಳುವಿಕೆ, ಜಾನುವಾರು ಕಳ್ಳಸಾಗಣೆ, ಗಡಿ ಬೇಲಿ, ನದಿ ಗಸ್ತು ಮುಂತಾದ ವಿಷಯಗಳ ಬಗ್ಗೆಯೂ ಹಿರಿಯ ಬಿಎಸ್‌ಎಫ್ ಅಧಿಕಾರಿಗಳೊಂದಿಗೆ ಚರ್ಚಿಸುವ ಸಾಧ್ಯತೆಯಿದೆ ಎಂದು ಅರೆಸೇನಾ ಪಡೆಯ ಮೂಲಗಳು ತಿಳಿಸಿವೆ. ಮಂಗಳವಾರವೂ ಅಮಿತ್ ಶಾ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.