ನವದೆಹಲಿ: ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಕಣಿವೆ ರಾಜ್ಯ ಜಮ್ಮು-ಕಾಶೀರದಲ್ಲಿ ಆದಷ್ಟು ಶೀಘ್ರ ವಿಧಾನಸಭಾ ಚುನಾವಣೆ ನಡೆಸುವ ಸುಳಿವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ನೀಡಿದ್ದಾರೆ.
ಕಳೆದ ಮೂರುವರೆ ದಶಕಗಳ ನಂತರ ಜಮು ಮತ್ತು ಕಾಶೀರ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಲಡಾಕ್‌ನಲ್ಲಿ ನಿರೀಕ್ಷೆಗೂ ಮೀರಿ ಮತದಾರರು ಸಕ್ರಿಯ ವಾಗಿ ಪಾಲ್ಗೊಂಡು ತಮ ಹಕ್ಕು ಚಲಾಯಿಸಿದ್ದಾರೆ. ಅಂದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ಎಲ್ಲಾ ತೀರ್ಮಾನಕ್ಕೂ ಬೆಂಬಲವಿದೆ ಎಂಬುದನ್ನು ಮತದಾರರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶೀರದಲ್ಲಿ ನಡೆದ ಯಶಸ್ವಿ ಮತದಾನದಿಂದ ಪ್ರತ್ಯೇಕತಾವಾದಿಗಳು ಕೂಡ ಅಗಾಧ ಮತ ಚಲಾಯಿಸುವ ಮೂಲಕ ಮೋದಿ ಸರ್ಕಾರದ ಕಾಶೀರ ನೀತಿಯನ್ನು ಸಮರ್ಥಿಸಿಕೊಂಡಿದೆ. ವಿಧಾನಸಭಾ ಚುನಾವಣೆ ನಡೆಸುವ ಸಂಬಂಧ ಸೆಪ್ಟೆಂಬರ್ 30 ರ ಮೊದಲ ಸಭೆ ಜರಗಲಿದೆ.
ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿದ ನಂತರ, ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿ ಸುತ್ತದೆ.