Sunday, 15th December 2024

Shankaracharya Swami: ಮುಸ್ಲಿಮರು ಭಾರತದಲ್ಲಿ ಇರಲೇಬಾರದು; ಕಾಂಗ್ರೆಸ್‌ನ ನೆಚ್ಚಿನ ಶಂಕರಾಚಾರ್ಯ ಸ್ವಾಮೀಜಿಯ ಹೊಸ ಹೇಳಿಕೆ!

Shankaracharya Swami

ನವದೆಹಲಿ: ಮುಸ್ಲಿಮರು ಭಾರತದಲ್ಲಿ (muslims in india) ಇರುವುದಕ್ಕೆ ಕಾರಣಗಳು ಇಲ್ಲ. ಅವರಿಗಾಗಿ 57 ಮುಸ್ಲಿಂದ ದೇಶಗಳಿಎ. ಅವರು ಅಲ್ಲಿಗೆ ಹೋಗುವುದೇ ಸೂಕ್ತ. ಅವರು ಭಾರತದಲ್ಲೇ ಏಕೆ ಉಳಿದುಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ನೆಚ್ಚಿನ ಸ್ವಾಮೀಜಿ ಜ್ಯೋತಿರ್ಮಠದ ( Jyotirmath) ಶಂಕರಾಚಾರ್ಯ ಸ್ವಾಮಿ (Shankaracharya Swami) ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ( Avimukteshwaranand Saraswati Maharaj) ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರ ಮುಸ್ಲಿಮರಿಗೆ ಭಾರತ ಬಿಟ್ಟು ತೊಲಗಿ ಎಂದು ಕರೆ ಕೊಟ್ಟಿದ್ದಾರೆ.

ನೇರ, ದಿಟ್ಟ ಹೇಳಿಕೆಗಳಿಂದಲೇ ಖ್ಯಾತಿ ಗಳಿಸಿರುವ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ಆಗಾಗ್ಗೆ ಜನರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾರೆ. ಅದೇ ರೀತಿ ಮೋದಿ ನೇತೃತ್ವದ ಸರ್ಕಾರವನ್ನು ನಿರಂತರ ಟೀಕಿಸುತ್ತಲೇ ಇರುವ ಇವರು ಇದಕ್ಕಾಗಿಯೇ ಕಾಂಗ್ರೆಸ್ಸಿಗರಿಗೆ ಹತ್ತಿರವಾಗಿದ್ದಾರೆ. ಆಗಾಗ್ಗೆ ಕೇಂದ್ರ ಸರ್ಕಾರದ ಬಗ್ಗೆ ಧ್ವನಿ ಎತ್ತುವ ಅವರು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತುಂಬಾ ಹತ್ತಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಅವರು ಕಾಂಗ್ರೆಸ್ ನ ಬಹುದೊಡ್ಡ ವೋಟ್ ಬ್ಯಾಂಕ್ ಎಂದೇ ಪರಿಗಣಿಸಲ್ಪಟ್ಟಿರುವ ಮುಸ್ಲಿಮರ ವಿರುದ್ಧ ನೀಡಿರುವ ಹೇಳಿಕೆಯು ಭಾರಿ ವೈರಲ್ ಆಗಿದೆ.

ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಅವರು ಭಾರತೀಯ ಮುಸ್ಲಿಮರ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಮುಸ್ಲಿಮರು ಹಿಂದೂಗಳ ನಡುವೆ ಏಕೆ ವಾಸಿಸುತ್ತಿದ್ದಾರೆ ಎಂದು ಪ್ರಶ್ನಿಸಿರುವ ಅವರು, ಭಾರತದಲ್ಲಿ ಅವರು ಉಳಿಯಲು ಯಾವುದೇ ಕಾರಣವಿಲ್ಲ ಎಂದು ಹೇಳಿದ್ದಾರೆ.

ಅವರು ಹೋಗಬಹುದಾದ 57 ದೇಶಗಳು ಈಗಾಗಲೇ ಇವೆ. ಮುಸ್ಲಿಮರು ತಮ್ಮ ಇಸ್ಲಾಮಿಕ್ ದೇಶಗಳಲ್ಲಿ ಉಳಿಯಬೇಕು ಎಂದು ಅವರು ತಿಳಿಸಿದ್ದಾರೆ. ಭಾರತ ಇಸ್ಲಾಮಿಕ್ ರಾಷ್ಟ್ರವಲ್ಲ. ದೇಶ ವಿಭಜನೆಗೆ ಮುಸ್ಲಿಮರು ಕೊಡುಗೆ ನೀಡಿದ್ದರೆ ಅವರು ಇನ್ನೂ ಭಾರತದಲ್ಲಿ ಏಕೆ ಇದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಯಾರು ಸ್ವಾಮಿ ಅವಿಮುಕ್ತೇಶ್ವರಾನಂದ?

ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಈ ಹಿಂದೆ ಅಪೂರ್ಣ ರಾಮಮಂದಿರದ ಶಂಕುಸ್ಥಾಪನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಅವರು ಕಾಂಗ್ರೆಸ್ ಬೆಂಬಲಿಗ ಎಂದೇ ಖ್ಯಾತರಾಗಿದ್ದಾರೆ.

Mandya Violence: ಇದು ಕಾಂಗ್ರೆಸ್ ಪ್ರಾಯೋಜಿತ ಗಲಭೆ: ಎಚ್‌ಡಿಕೆ ಆರೋಪ, ಸಂತ್ರಸ್ತರಿಗೆ 2 ಲಕ್ಷ ರೂ. ನೆರವು

ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಪಟ್ಟಿ ತೆಹಸಿಲ್‌ನ ಬ್ರಹ್ಮನ್‌ಪುರ ಗ್ರಾಮದಲ್ಲಿ ಜನಿಸಿದ ಅವರು ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಶಾಸ್ತ್ರ ಮತ್ತು ಆಚಾರ್ಯ ಅಧ್ಯಯನ ಮಾಡಿದ್ದಾರೆ. ಅವರು ವಿದ್ಯಾರ್ಥಿ ಜೀವನದಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದು, 1994 ರಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಗೆದ್ದಿದ್ದರು.