Thursday, 12th December 2024

ವಿಪಕ್ಷಗಳ ಸಭೆಯಲ್ಲಿ “ಪ್ರಧಾನಿ ಹುದ್ದೆ” ಕುರಿತು ಚರ್ಚೆ ನಡೆದಿಲ್ಲ: ಶರದ್ ಪವಾರ್

ಬಾರಾಮತಿ: ಪಾಟ್ನಾದಲ್ಲಿ ಕಳೆದ ವಾರ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ “ಪ್ರಧಾನಿ ಹುದ್ದೆ” ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಸೋಮವಾರ ಹೇಳಿದ್ದಾರೆ.

ಹಣದುಬ್ಬರ, ನಿರುದ್ಯೋಗ ಮತ್ತು ಕೋಮುವಾದಿ ಶಕ್ತಿಗಳನ್ನು ಉತ್ತೇಜಿಸಲು ಕೆಲವು ಸ್ಥಳಗಳಲ್ಲಿ ಉದ್ದೇಶಪೂರ್ವಕ ಪ್ರಯತ್ನಗಳಂತಹ ವಿಷಯಗಳ ಕುರಿತು ಚರ್ಚೆಗಳು ನಡೆದಿವೆ ಎಂದು ತಿಳಿಸಿದರು.

ಪ್ರತಿಪಕ್ಷಗಳ ಸಭೆಯನ್ನು ಟೀಕಿಸಿದ್ದಕ್ಕಾಗಿ ಅವರು ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ,ಪಕ್ಷಗಳ ಸಭೆಯ ಬಗ್ಗೆ ಬಿಜೆಪಿ ಏಕೆ ಚಿಂತಿಸು ತ್ತಿದೆ, ಅವರಿಗೆ ರಾಜಕೀಯ ಪ್ರಬುದ್ಧತೆಯ ಕೊರತೆಯಿದೆ ಎಂದರು.

’19 ಮಂದಿ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳು’ ಸಭೆಗೆ ಬಂದಿದ್ದರು ಎಂದು ವಿಪಕ್ಷಗಳು ಅಪಹಾಸ್ಯ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಇದು ಬಾಲಿಶ ಹೇಳಿಕೆ ಎಂದು ಪವಾರ್ ಹೇಳಿದ್ದಾರೆ.