Thursday, 12th December 2024

ಬಂಗಾಳಿ ಕವಿ, ಲೇಖಕ ಶರತ್‍ಕುಮಾರ್ ಮುಖರ್ಜಿ ಇನ್ನಿಲ್ಲ

ಕೋಲ್ಕತಾ: ಬಂಗಾಳಿ ಕವಿ ಮತ್ತು ಲೇಖಕ ಶರತ್‍ಕುಮಾರ್ ಮುಖರ್ಜಿ(90 ವರ್ಷ) ಅವರು ಮಂಗಳವಾರ ಹೃದಯ ಸ್ತಂಭನದಿಂದ ನಿಧನರಾದರು.

ಸುನೀಲ್‍ ಗಂಗೂಲಿ ಮತ್ತು ಶಕ್ತಿ ಚಟ್ಟೋಪಾಧ್ಯಾಯ ಅವರೊಂದಿಗೆ ಪ್ರಮುಖ ಸವ್ಯೋತ್ತರ ಕವಿಗಳ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು.

ಶರತ್ ಮುಖೋಪಾಧ್ಯಾಯ ಎಂದೂ ಹೆಸರಾಗಿದ್ದ ಮುಖರ್ಜಿ ತ್ರಿಶಂಕು ಕಾವ್ಯನಾಮದಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದರು. ಟು ಗಾಡ್ ಮತ್ತು ಬಿರಜಾ ಮೋಹನ್ ನಂತಹ ಕವಿತೆಗಳಿಂದ ಖ್ಯಾತರಾಗಿದ್ದರು. ಮುಖರ್ಜಿ ಅವರು ಪುತ್ರ ಸಯಾನ್ ಮುಖರ್ಜಿ ಅವರನ್ನು ಅಗಲಿದ್ದಾರೆ. ಸಂಸ್ಕೃತ ವಿದುಷಿ, ಕವಯಿತ್ರಿಯಾಗಿದ್ದ ಅವರ ಪತ್ನಿ ವಿಜಯ ಮುಖ್ಯೋ ಪಾಧ್ಯಾಯ ಅವರು ಈ ಹಿಂದೆಯೇ ವಿಧಿವಶರಾಗಿದ್ದರು.