Saturday, 14th December 2024

ಶೇರು ಮಾರಾಟದಲ್ಲಿ ತೀವ್ರ ಕುಸಿತ: 2.7 ಲಕ್ಷ ಕೋಟಿ ರೂಪಾಯಿ ನಷ್ಟ

ಮುಂಬೈ: ಐಟಿ ಮತ್ತು ಹಣಕಾಸಿಗೆ ಸಂಬಂಧಪಟ್ಟ ಶೇರು ಮಾರಾಟ ತೀವ್ರ ಕಡಿಮೆ ವಹಿವಾಟು ನಡೆಸಿದ ಪರಿಣಾಮ, ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 1,0,66.33 ಅಂಕಗಳಷ್ಟು ಕುಸಿತ ಕಂಡಿದ್ದು, 39, 728.41 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 290.70ಅಂಕಗಳಷ್ಟು ಕುಸಿತ ಕಂಡಿದ್ದು, 11,680.35 ಅಂಕಗಳ ವಹಿವಾಟಿ ನೊಂದಿಗೆ ಮುಕ್ತಾಯ ಕಂಡಿದೆ. ಒಂದೇ ದಿನದಲ್ಲಿ ಹೂಡಿಕೆ ದಾರರಿಗೆ 2.7 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವರದಿ ತಿಳಿಸಿದೆ.

ಅಮೆರಿಕ ವಿಶ್ವ ಆರ್ಥಿಕ ನೀತಿಯನ್ನು ಮುನ್ನಡೆಸುವ ಮುಂಚೂಣಿ ಸ್ಥಾನದಲ್ಲಿದೆ. ಆದರೆ ಅಮೆ ರಿಕದ ಆಂತರಿಕ ರಾಜಕೀಯ ದಿಂದಾಗಿ ಪ್ಯಾಕೇಜ್ ಘೋಷಣೆ ವಿಳಂಬವಾಗಿದೆ.

ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್ ಅವರ ಮರು ಆಯ್ಕೆ ಅನಿಶ್ಚಿತತೆಯಲ್ಲಿದೆ. ಇದು ವಿಶ್ವ ಆರ್ಥಿಕತೆಗೆ ಕೆಟ್ಟ ವಿಷಯವಾಗಿದ್ದು, ಶೇರು ಮಾರುಕಟ್ಟೆ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.