Sunday, 15th December 2024

ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಎಚ್ಚರಿಕೆಯ ವಹಿವಾಟು

ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಬೆಳವಣಿಗೆಯ ಪರಿಣಾಮ ಬುಧವಾರ ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯೊಂದಿಗೆ ಎಚ್ಚರಿಕೆಯ ವಹಿವಾಟು ಆರಂಭಿಸಿದೆ.

ಷೇರುಪೇಟೆ ಸಂವೇದಿ ಸೂಚ್ಯಂಕ 128.84 ಅಂಕಗಳ ಏರಿಕೆಯೊಂದಿಗೆ 50, 492.80 ಅಂಕಗಳ ವಹಿವಾಟು ನಡೆಸಿದೆ. ಎನ್ಎಸ್ಇ ನಿಫ್ಟಿ 30.50 ಅಲ್ಪ ಅಂಕಗಳ ಏರಿಕೆಯೊಂದಿಗೆ 14,940.95 ಅಂಕಗಳ ವಹಿವಾಟು ಆರಂಭಿಸಿದೆ. ಸೆನ್ಸೆಕ್ಸ್ ಅಲ್ಪ ಚೇತರಿಕೆಯಿಂದ ಟೆಕ್ ಮಹೀಂದ್ರ, ಎಚ್ ಡಿಎಫ್ ಸಿ ಬ್ಯಾಂಕ್, ಟಿಸಿಎಸ್ ಷೇರುಗಳು ಲಾಭಗಳಿಸಿವೆ.

ಮಂಗಳವಾರ ಷೇರುಪೇಟೆಯ ಸಂವೇದಿ ಸೂಚ್ಯಂಕ 31.12 ಅಂಕಗಳ ಕುಸಿತ ದಾಖಲಿಸಿ, 50, 363.96ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily