Thursday, 12th December 2024

ಷೇರುಪೇಟೆ ಸೆನ್ಸೆಕ್ಸ್ 264 ಅಂಕಗಳ ಏರಿಕೆ

ಮುಂಬೈ: ಮಂಗಳವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 264 ಪಾಯಿಂಟ್ಸ್‌ ಏರಿಕೆ ದಾಖಲಿಸಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 70 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 264 ಪಾಯಿಂಟ್ಸ್ ಏರಿಕೆಗೊಂಡು 52815.79, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 70.90 ಪಾಯಿಂಟ್ಸ್‌ ಅಥವಾ ಶೇ. 0.45ರಷ್ಟು ಏರಿಕೆಗೊಂಡು 15882.80 ಪಾಯಿಂಟ್ಸ್‌ ಮುಟ್ಟಿದೆ. ದಿನದ ವಹಿವಾಟು ಆರಂಭದಲ್ಲಿ 1947 ಷೇರುಗಳು ಏರಿಕೆಗೊಂಡರೆ, 716 ಷೇರುಗಳು ಕುಸಿದಿವೆ.

ಅದಾನಿ ಪೋರ್ಟ್ಸ್ ಷೇರುಗಳು 15 ರೂ.ಗಳ ಲಾಭದೊಂದಿಗೆ 783.15 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು 2 ರೂ.ಗಳ ಏರಿಕೆ ಕಂಡು 250.75 ರೂ., ಎಚ್‌ಡಿಎಫ್‌ಸಿ ಷೇರುಗಳು 18 ರೂ.ಗಳ ಏರಿಕೆ ಕಂಡು 2,557.50 ರೂ. ತಲುಪಿದೆ.

ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರುಗಳು 920 ರೂ.ಗಳಷ್ಟು ಇಳಿಕೆಯಾಗಿ 720.50 ರೂ., ಯುಪಿಎಲ್ ಷೇರು ಸುಮಾರು 3 ರೂ. ಇಳಿಕೆಗೊಂಡು 831.15 ರೂ.ಗೆ ಪ್ರಾರಂಭವಾಯಿತು, ಟಾಟಾ ಸ್ಟೀಲ್ ಷೇರುಗಳು ಸುಮಾರು 2 ರೂ.ಗಳಷ್ಟು ಇಳಿಕೆಯಾಗಿ 1,162.35 ರೂ., ಎಸ್‌ಬಿಐ ಲೈಫ್‌ನ ಷೇರುಗಳು ಸುಮಾರು 2 ರೂ.ಗಳಷ್ಟು ಇಳಿಕೆಯಾಗಿ 984.20 ರೂ. ತಲುಪಿದೆ.