Friday, 13th December 2024

ಶೌಕತ್‌ ಅಹ್ಮದ್‌ ಶೇಖ್‌ ’ಉಗ್ರ’ ಎಂದು ಘೋಷಣೆ

ನವದೆಹಲಿ: ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ಚೀಫ್‌ ಲಾಂಚಿಂಗ್‌ ಕಮಾಂಡರ್‌ ಶೌಕತ್‌ ಅಹ್ಮದ್‌ ಶೇಖ್‌ನನ್ನು ಕೇಂದ್ರ ಸರ್ಕಾರವು ಉಗ್ರ ಎಂದು ಘೋಷಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ, ಹಿಂಸೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ ಅಡಿಯಲ್ಲಿ ಉಗ್ರ ಎಂಬುದಾಗಿ ಘೋಷಣೆ ಮಾಡಿದೆ.

ಜಮ್ಮು-ಕಾಶ್ಮೀರಕ್ಕೆ ಪಾಕಿಸ್ತಾನದ ಉಗ್ರರು ನುಸುಳಲು ಸಹಕಾರ, ಉಗ್ರ ಸಂಘಟನೆಗೆ ಯುವಕರ ನೇಮಕ, ಉತ್ತರ ಕಾಶ್ಮೀರ ದಲ್ಲಿ ಉಗ್ರ ಚಟುವಟಿಕೆ ಗಳನ್ನು ಕೈಗೊಳ್ಳುವುದು ಸೇರಿ ಹಲವು ಕೃತ್ಯಗಳಲ್ಲಿ ಭಾಗಿಯಾದ ಕಾರಣ ಯುಎಪಿಎ ಅಡಿಯಲ್ಲಿ ಉಗ್ರ ನೆಂದು ಘೋಷಿಸಲಾಗಿದೆ.

ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಶೌಕತ್‌ ಅಹ್ಮದ್‌ ಶೇಖ್‌ ಜನಿಸಿದ್ದಾನೆ. ಶೌಕತ್‌ ಮೋಚಿ ಎಂದೇ ಈತ ಖ್ಯಾತ ನಾಗಿದ್ದಾನೆ. ಶೌಕತ್‌ ಮೋಚಿ ವಿರುದ್ಧ ಹತ್ತಾರು ದಾಖಲೆಗಳು ಲಭ್ಯವಾಗಿದ್ದು, ಆತನು ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾದ ಕುರಿತು ಮಾಹಿತಿ ಇದೆ ಎಂದು ಮೂಲಗಳು ತಿಳಿಸಿವೆ.