ಛತ್ತೀಸ್ಗಢ: ಈ ವ್ಯಕ್ತಿ ವಿಶಿಷ್ಟ ಸಂಕಲ್ಪದೊಂದಿಗೆ ಕಳೆದ 21 ವರ್ಷಗಳಿಂದ ಗಡ್ಡ ಬೋಳಿಸಿಕೊಂಡಿರಲಿಲ್ಲ.
ಮನೇಂದ್ರಗಢ-ಚಿರ್ಮಿರಿ-ಭಾರತ್ಪುರ (ಎಂಸಿಬಿ)ಯನ್ನು ಹೊಸ ಜಿಲ್ಲೆ ಮಾಡಬೇಕು ಎಂಬುದು ಆತನ ಉದ್ದೇಶ ಈಡೇರಿದ ಬೆನ್ನಲ್ಲೇ ಆರ್ಟಿಐ ಕಾರ್ಯಕರ್ತ, ಮನೇಂದ್ರ ಗಢ ನಿವಾಸಿ ರಾಮಶಂಕರ್ ಗುಪ್ತಾ ಗಡ್ಡ ಬೋಳಿಸಿಕೊಂಡಿದ್ದಾರೆ. ಛತ್ತೀಸ್ಗಢ ಸರ್ಕಾರ ಎಂವಿಸಿಯನ್ನು ರಾಜ್ಯದ 32ನೇ ಜಿಲ್ಲೆಯಾಗಿ ಕಾರ್ಯಾರಂಭಿಸಿದೆ.
ಮನೇಂದ್ರಗಢ-ಚಿರ್ಮಿರಿ-ಭಾರತ್ಪುರವನ್ನು ಹೊಸ ಜಿಲ್ಲೆಯಾಗಿ ಘೋಷಿಸಿದ ನಂತರ ಗುಪ್ತಾ ಗಡ್ಡ ಬೋಳಿಸಿಕೊಂಡಿದ್ದರು. ಜಿಲ್ಲೆಯನ್ನು ಉದ್ಘಾಟಿಸಲು ಸುಮಾರು ಒಂದು ವರ್ಷ ಸಮಯ ತೆಗೆದುಕೊಂಡಿದ್ದರಿಂದ, ಗುಪ್ತಾ ಮತ್ತೆ ಒಂದು ವರ್ಷ ಗಡ್ಡವನ್ನು ಬೋಳಿಸಿಕೊಳ್ಳದೆ ತಮ್ಮ ನಿರ್ಣಯವನ್ನು ಮುಂದುವರೆಸಿದರು.
ಮನೇಂದ್ರಗಢ-ಚಿರ್ಮಿರಿ-ಭರತ್ಪುರ ಜಿಲ್ಲೆಯಾಗುವವರೆಗೆ ನಾನು ನನ್ನ ಗಡ್ಡವನ್ನು ಬೋಳಿಸಿಕೊಳ್ಳುವುದಿಲ್ಲ ಎಂಬುದು ಅವರ ಅಚಲ ನಿರ್ಣಯವಾಗಿತ್ತು. ಇದು 40 ವರ್ಷಗಳ ಹೋರಾಟ. ಜಿಲ್ಲೆಯ ಮಾನ್ಯತೆಗಾಗಿ ಹೋರಾಡಿದವರೆಲ್ಲ ಈಗಾಗ್ಲೇ ಮೃತ ಪಟ್ಟಿದ್ದಾರೆ. ಜಿಲ್ಲೆಯ ಮಾನ್ಯತೆ ನೀಡಿದ ಮುಖ್ಯಮಂತ್ರಿ ಭೂಪೇಶ್ ಬಘೇಲ್ಗೆ ಅವರು ಧನ್ಯವಾದ ಹೇಳಿದ್ದಾರೆ.
ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು 32ನೇ ಜಿಲ್ಲೆಯಾಗಿ ಮನೇಂದ್ರಗಢ-ಚಿರ್ಮಿರಿ-ಭರತ್ಪುರಕ್ಕೆ ಚಾಲನೆ ನೀಡಿದರು. ಜಿಲ್ಲಾ ಕೇಂದ್ರವು ಮನೇಂದ್ರಗಢದಲ್ಲಿದ್ದು, ಚಿರ್ಮಿರಿಯಲ್ಲಿರುವ 100 ಹಾಸಿಗೆಗಳ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆ ಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದರು.