Saturday, 14th December 2024

ನಟ ಶೀಜನ್ ನ್ಯಾಯಾಂಗ ಬಂಧನ ಡಿ.30ವರೆಗೆ ವಿಸ್ತರಣೆ

ವದೆಹಲಿ: ಸಹನಟಿ ಹಾಗೂ ಮಾಜಿ ಗೆಳತಿ ತುನೀಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ಶೀಜನ್ ಖಾನ್ ನ್ಯಾಯಾಂಗ ಬಂಧನವನ್ನು ಡಿ.30ವರೆಗೆ ವಿಸ್ತರಿಸಲಾಗಿದೆ.

ತನಿಖೆಯ ಭಾಗವಾಗಿ ನಟ ಶೀಜನ್ ಖಾನ್ ಶುಕ್ರವಾರದವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಬೇಕು ಎಂದು ಮುಂಬೈನ ನ್ಯಾಯಾಲಯ ತಿಳಿಸಿದೆ.

ನಟಿ ತುನೀಶಾ ಶರ್ಮಾ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಎಂಬಲ್ಲಿ ಟಿವಿ ಕಾರ್ಯಕ್ರಮವೊಂದರ ಸೆಟ್‌ನಲ್ಲಿ ಡಿಸೆಂಬರ್ 24ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಸಹ ನಟ ಶೀಜಾನ್ ಮೊಹಮ್ಮದ್ ಖಾನ್ ಅವರನ್ನು ಬಂಧಿಸಲಾಗಿದೆ.

ಶೀಜಾನ್ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಲಾ ಗಿದೆ. ಶೀಜಾನ್ ಖಾನ್ ಮತ್ತು ತುನೀಶಾ ಆತ್ಮಹತ್ಯೆ ಮಾಡಿಕೊಳ್ಳುವ 15 ದಿನಗಳ ಮೊದಲು ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ.

ತುನೀಶಾ ಶರ್ಮಾ ಅವರು ಸಾವಿಗೆ ಒಂದು ವಾರದ ಮೊದಲು ಪ್ಯಾನಿಕ್ ಆಟ್ಯಾಕ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದರು. ತುನೀಶಾ ಶರ್ಮಾ ಜೂನ್‌ನಿಂದ ಟಿವಿ ಧಾರವಾಹಿ ಅಲಿಬಾಬಾ ದಸ್ತಾನ್ ಇ ಕಾಬೂಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು.

 
Read E-Paper click here