Monday, 18th November 2024

Sheikh Hasina: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್‌ ಹಸೀನಾ ವಿರುದ್ಧ ಅರೆಸ್ಟ್‌ ವಾರೆಂಟ್‌

shiek hasina

ಢಾಕಾ: ಬಾಂಗ್ಲಾದೇಶ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡು ಬಳಿಕ ಅಲ್ಲಿಂದ ವಿದೇಶಕ್ಕೆ ಪರಾರಿಯಾಗಿರುವ ಶೇಖ್ ಹಸೀನಾ (Sheikh Hasina) ವಿರುದ್ಧ ಅರೆಸ್ಟ್‌ ವಾರೆಂಟ್‌(Arrest Warrant) ಜಾರಿಯಾಗಿದೆ. ಶೇಖ್‌ ಹಸೀನಾ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿಗೊಳಿಸಿರುವ ನ್ಯಾಯಾಲಯ, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ತಕ್ಷಣ ಬಂಧಿಸುವಂತೆ ಆದೇಶ ಹೊರಡಿಸಿದೆ.

ಶೇಖ್‌ ಹಸೀನಾ ಅವರನ್ನು ಬಂಧಿಸಿ ನವೆಂಬರ್ 18 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯ ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ತಾಜುಲ್ ಇಸ್ಲಾಂ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಬಾಂಗ್ಲಾದೇಶದಲ್ಲಿ ನಡೆದ ಭೀಕರ ಪ್ರತಿಭಟನೆ, ಹತ್ಯಾಕಾಂಡಕ್ಕೆ ಆಗಿನ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರೇ ನೇರ ಹೊಣೆ. ಹೀಗಾಗಿ ಅವರನ್ನು ತಕ್ಷಣ ಬಂಧಿಸಬೇಕು ಎಂದು ತಾಜುಲ್‌ ಇಸ್ಲಾಂ ಅವರು ಅಭಿಪ್ರಾಯಪಟ್ಟಿದ್ದಾರೆ.

ಬಾಂಗ್ಲಾಪ್ರದೇಶದಲ್ಲಿ ಭೀಕರ ಪ್ರತಿಭಟನೆ ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪರಾರಿಯಾಗಿದ್ದರು. ಅಲ್ಲಿಂದ ಪಲಾಯಣ ಮಾಡಿ ನೇರವಾಗಿ ಭಾರತಕ್ಕೆ ಆಗಮಿಸಿದ್ದ ಹಸೀನಾ ದೆಹಲಿಯಲ್ಲಿ ಆಶ್ರಯ ಪಡೆದಿದ್ದರು. ಬಳಿಕ ಅವರು ಲಂಡನ್‌ಗೆ ತೆರಳಿ ಅಲ್ಲೇ ಇದ್ದಾರೆ.

ಮತ್ತೊಬ್ಬ ಹಸೀನಾ ಸ್ನೇಹಿತನ ವಿರುದ್ಧ ವಾರೆಂಟ್

ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಪರಾರಿಯಾದ ಮಾಜಿ ಪ್ರಧಾನ ಕಾರ್ಯದರ್ಶಿ ಒಬೈದುಲ್ ಕ್ವಾಡರ್ ಮತ್ತು ಹೆಸರಿಸದ ಇತರ 44 ಮಂದಿಗೆ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ. ಹಸೀನಾ ಅವರು ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಅವರ ಅನೇಕ ಸ್ನೇಹಿತರನ್ನು ಸರಕಾರ ಅರೆಸ್ಟ್‌ ಮಾಡಿದೆ. ಬಾಂಗ್ಲಾದೇಶದಲ್ಲಿ ಭುಗಿಲೆದ್ದಿದ್ದ ದಂಗೆಯ ಸಂದರ್ಭದಲ್ಲಿ 700 ಕ್ಕೂ ಹೆಚ್ಚು ಜನರನ್ನು ಕೊಂದ ಪೋಲೀಸ್ ದಮನದಲ್ಲಿ ತಪ್ಪಿತಸ್ಥರೆಂದು ಆರೋಪಿಸಲಾಯಿತು.

ಹಸೀನಾ ಅವರನ್ನು ಪದಚ್ಯುತಗೊಳಿಸಿವುದಕ್ಕಾಗಿ ನಡೆದ ವಿದ್ಯಾರ್ಥಿ ನೇತೃತ್ವದ ಚಳವಳಿಯ ಪರಿಣಾಮವಾಗಿ 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದು ಭಾರತದೊಂದಿಗಿನ ಸಂಬಂಧವನ್ನು ಹದಗೆಡಿಸಿತ್ತು. ಎರಡೂ ದೇಶಗಳು ಬಂಗಾಳ ಕೊಲ್ಲಿಯಲ್ಲಿ 4,000 ಕಿ.ಮೀ (2500 ಮೈಲಿ) ಗಡಿ ಮತ್ತು ಕಡಲ ಗಡಿಗಳನ್ನು ಹೊಂದಿವೆ. ರಾಜಕೀಯ ಬದಲಾವಣೆಗಳ ನಂತರ ಬಾಂಗ್ಲಾದೇಶದ ಅಲ್ಪಸಂಖ್ಯಾತ ಗುಂಪುಗಳು ಹಿಂದೂಗಳ ಮೇಲೆ ದಾಳಿ ಮಾಡುತ್ತಿವೆ. ಆದರೆ ಹಿಂಸಾಚಾರವು ರಾಜಕೀಯದಿಂದ ಪ್ರೇರಿತವಾಗಿದೆ, ಧರ್ಮದಿಂದಲ್ಲ ಎಂದು ಅಲ್ಲಿನ ಸರ್ಕಾರ ಹೇಳುತ್ತಿದೆ.

ಈ ಸುದ್ದಿಯನ್ನೂ ಓದಿ: Illegal Bangladeshi immigrants: ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ 7 ಮಂದಿ ವಶ