ನವದೆಹಲಿ: ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಟಿಕ್ರಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗಾಗಿ ಕೆಲವು ಶಾಶ್ವತ ಆಶ್ರಯ ಮನೆಗಳನ್ನು ಕಿಸಾನ್ ಸೋಷಿಯಲ್ ಆರ್ಮಿ ನಿರ್ಮಿಸಿದೆ.
ಕಿಸಾನ್ ಸೋಷಿಯಲ್ ಆರ್ಮಿ ನಾಯಕ ಅನಿಲ್ ಮಲಿಕ್, ರೈತರ ದೃಢ ನಿಲುವಿನಂತೆ ಈ ಮನೆಗಳು ಸಹ ಗಟ್ಟಿಮುಟ್ಟಾಗಿವೆ. ಇದುವರೆಗೆ 25 ಮನೆಗಳನ್ನು ನಿರ್ಮಿಸಿದ್ದೇವೆ. ಮುಂದಿನ ದಿನಗಳಲ್ಲಿ 2 ಸಾವಿರದಷ್ಟು ಇಂತಹ ಮನೆಗಳನ್ನು ನಿರ್ಮಿಸಬೇಕೆಂದಿ ದ್ದೇವೆ ಎಂದರು.
ತಾಪಮಾನ ಹೆಚ್ಚಿದರೆ ಪ್ರತಿಭಟನಾಕಾರರ ಅಗತ್ಯಗಳಿಗೆ ಕೂಲರ್ ಗಳನ್ನು ಇಡುತ್ತೇವೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುತ್ತದೆ ಎಂದು ಭಾವಿಸುತ್ತೇವೆ ಎಂದರು.
ಹೊಸದಾಗಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಕಳೆದ ವರ್ಷ ನವೆಂಬರ್ 26 ರಿಂದ ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.