Thursday, 12th December 2024

ಶಿರಡಿ ಸಾಯಿ ಬಾಬಾಗೆ ಚಿನ್ನದ ಕಿರೀಟ ಅರ್ಪಣೆ

ಹಾರಾಷ್ಟ್ರ: ಬೆಂಗಳೂರಿನ ದಂಪತಿಯೊಬ್ಬರು ಶಿರಡಿ ಸಾಯಿ ಬಾಬಾಗೆ ಚಿನ್ನದ ಕಿರೀಟವನ್ನು ಅರ್ಪಿಸುವ ಮೂಲಕ ನೂತನ ವರ್ಷವನ್ನು ಆರಂಭಿಸಿದ್ದಾರೆ.

ಬೆಂಗಳೂರು ಮೂಲದ ಭಕ್ತರದಾ ದತ್ತ ಹಾಗೂ ಶಿವಾನಿ ದತ್ತ ದಂಪತಿಗಳು ಹೊಸ ವರ್ಷ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ತೆರಳಿದ್ದಾರೆ. ನಂತರ 928 ಗ್ರಾಂ ತೂಕದ ಚಿನ್ನದ ಕಿರೀಟವನ್ನು ಅರ್ಪಿಸಿದ್ದಾರೆ. ಇದರೊಂದಿಗೆ ಹೊಸ ವರ್ಷ ಆರಂಭಿಸಿದ್ದಾರೆ.

ದಂಪತಿಗಳು ಇದೀಗ ಶಿರಡಿ ಸಾಯಿ ಬಾಬಾಗೆ ಅರ್ಪಣೆ ಮಾಡಿರುವ ಚಿನ್ನದ ಕಿರೀಟದ ಮೌಲ್ಯ ಸುಮಾರು 46 ಲಕ್ಷದ 70 ಸಾವಿರ ರೂ. ಎಂದು ವರದಿಯಾಗಿದೆ.

ಮೊದಲಿನಿಂದಲೂ ನಾವು ಶಿರಡಿ ಸಾಯಿ ಬಾಬಾರನ್ನು ನಂಬಿಕೊಂಡು ಬರುತ್ತಿದ್ದೇವೆ ಎಂದು ದಂಪತಿಗಳು ಹೇಳಿಕೊಂಡಿದ್ದಾರೆ.

ಈ ಹಿಂದೆಯೂ ವಜ್ರ ಹಾಗೂ ಚಿನ್ನದ ಆಭರಣಗಳನ್ನು ಈ ದಂಪತಿ ಶಿರಡಿ ಸಾಯಿ ಬಾಬಾಗೆ ಅರ್ಪಿಸಿದ್ದರು.