Sunday, 15th December 2024

‘ದಿ ವೀಕ್’ನಲ್ಲಿ ಶಿವ-ಕಾಳಿ ದೇವತೆಯ ಆಕ್ಷೇಪಾರ್ಹ ಚಿತ್ರ: ಆಕ್ರೋಶ

ಕಾನ್ಪುರ: ‘ದಿ ವೀಕ್’ ನಿಯತಕಾಲಿಕೆಯಲ್ಲಿ ಶಿವ ಮತ್ತು ಕಾಳಿ ದೇವತೆಯ ಆಕ್ಷೇ ಪಾರ್ಹ ಚಿತ್ರ ಪ್ರಕಟಿಸಲಾಗಿದೆ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ.

ಜುಲೈ 24ರಂದು ವಿವೇಕ್ ದೆಬ್ರೋಯ್ ಎಂಬವರ ಲೇಖನದ ಜೊತೆಯಲ್ಲಿ ಈ ಆಕ್ಷೇಪಾರ್ಹ ಚಿತ್ರ ಪ್ರಕಟಿಸಲಾಗಿದೆ ಎಂದು ಹೇಳಲಾಗಿದ್ದು, ಹೀಗಾಗಿ ನಿಯತ ಕಾಲಿಕೆಯ ಪ್ರತಿಗಳನ್ನು ಸುಟ್ಟು ಹಾಕಿದ ಬಜರಂಗದಳ ಕಾರ್ಯಕರ್ತರು ಸಂಪಾ ದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶ ರಾಜ್ಯ ಬಿಜೆಪಿ ಘಟಕದ ಮಾಜಿ ಉಪಾಧ್ಯಕ್ಷ ಪ್ರಕಾಶ್ ಶರ್ಮಾ ನಿಯತ ಕಾಲಿಕೆಯ ಸಂಪಾದಕರು ಮತ್ತು ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿದ್ದು, ಪತ್ರಿಕೆಯ ಅಂಕಣಕಾರರಾಗಿದ್ದ ವಿವೇಕ್ ದೆಬ್ರೋಯ್ ಸಹ ಈ ಬೆಳವಣಿಗೆ ಬಳಿಕ ನಿಯತಕಾಲಿಕೆಯೊಂದಿಗೆ ತಮ್ಮ ಸಂಬಂಧ ಕಡಿದುಕೊಂಡಿದ್ದಾರೆ.