Saturday, 14th December 2024

4 ಜತೆ ಶೂ ದೋಚಿ ಪರಾರಿ: ಖದೀಮರಿಗೆ 7 ವರ್ಷ ಜೈಲು ಶಿಕ್ಷೆ

ಚಂಡೀಗಢ: ಶೂ ಶೋರೂಂ ಮಾಲೀಕರ ನೆತ್ತಿಗೆ ಗನ್‌ ಇಟ್ಟು 4 ಜತೆ ಶೂ ಗಳನ್ನು ದೋಚಿ ಪರಾರಿಯಾಗಿದ್ದ ಖದೀಮರಿಬ್ಬರಿಗೆ ಹರ್ಯಾಣದ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2021ರಂದು ಹರ್ಯಾಣದ ರೇವರಿ ನಗರದಲ್ಲಿ ಅಶೋಕ್‌ ಕುಮಾರ್‌ ಎಂಬವರ ಶೂ ಅಂಗಡಿ ಯನ್ನು ಖದೀಮರು ಲೂಟಿ ಗೈದಿದ್ದರು.

ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಅಶೋಕ್‌ ಅವರಿಗೆ ಪಿಸ್ತೂಲು ತೋರಿಸಿ ಹೆದರಿಸಿ, ತಲಾ 8,000 ರೂ. ಮೌಲ್ಯದ 4 ಜೊತೆ ಶೂ ಗಳನ್ನು ಕದ್ದಿದ್ದರು.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ದುಷ್ಮರ್ಮಿಗಳನ್ನು ಬಂಧಿಸಲಾಗಿತ್ತಾದರೂ, ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಅವರಿಗೀಗ ಶಿಕ್ಷೆ ವಿಧಿಸಲಾಗಿದೆ.

7 ವರ್ಷದ ಜೈಲು ವಾಸದ ಜತೆಗೆ 41 ಸಾವಿರ ರೂ.ದಂಡ ವಿಧಿಸಲಾಗಿದೆ. ದಂಡ ಪಾವತಿಸದೇ ಇದ್ದಲ್ಲಿ ಹೆಚ್ಚುವರಿ 6 ತಿಂಗಳ ಸೆರೆವಾಸ ಅನುಭವಿಸಬೇಕಿದೆ.