ಅಫ್ತಾಬ್, ಶ್ರದ್ಧಾ ಅವರನ್ನು ದಕ್ಷಿಣ ದೆಹಲಿಯ ಮಹ್ರೌಲಿಯಲ್ಲಿರುವ ತನ್ನ ಫ್ಲ್ಯಾಟ್ ನಲ್ಲಿ ಮೇ ತಿಂಗಳಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, 300 ಲೀಟರ್ ಸಾಮರ್ಥ್ಯದ ಫ್ರಿಜ್‌ನಲ್ಲಿ ಸುಮಾರು ಮೂರು ವಾರಗಳವರೆಗೆ ಇರಿಸಿದ್ದ. ನಂತರ ಅವುಗಳನ್ನು ನಗರದ ವಿವಿಧೆಡೆ ಮತ್ತು ಛತರ್‌ಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳವರೆಗೆ ಒಂದೊಂದಾಗಿ ಬಿಸಾಡಿದ್ದ.
‘ಸಿಟ್ಟಿನ ಭರದಲ್ಲಿ ಅಪರಾಧ ಎಸಗಿದೆ’ ಎಂದು ಪೂನಾವಾಲಾ ಒಪ್ಪಿಕೊಂಡಿದ್ದಾನೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ಮೊದಲ ಬಾರಿಗೆ ಮಾತನಾಡಿದ್ದ ಶ್ರದ್ಧಾ ವಾಲಕರ್ ಅವರ ತಂದೆ ವಿಕಾಸ್ ವಾಲಕರ್, ‘ನನ್ನ ಮಗಳು ಬರ್ಬರವಾಗಿ ಹತ್ಯೆಯಾದಳು. ವಾಸೈ ಪೊಲೀಸ್ ಠಾಣೆಯ ಪೊಲೀಸರಿಂದಾಗಿ ನಾನು ಹಲವು ಸಮಸ್ಯೆಗಳನ್ನು ಎದುರಿಸಿ ದ್ದೇನೆ. ಅವರು ನನಗೆ ಸಹಾಯ ಮಾಡಿದ್ದಿದ್ದರೆ ನನ್ನ ಮಗಳು ಜೀವಂತವಾಗಿರುತ್ತಿದ್ದಳು’ ಎಂದು ಹೇಳಿದ್ದರು.