Sunday, 8th September 2024

ಹಿ.ಪ್ರದೇಶ ವಿಧಾನಸಭೆ ಚುನಾವಣೆ: ಮೊತ್ತ ಮೊದಲ ಮತದಾರನಿಂದ ಮತ ಚಲಾವಣೆ

ಶಿಮ್ಲಾ: ಸ್ವತಂತ್ರ ಭಾರತದ ಮೊತ್ತ ಮೊದಲ ಮತದಾರ ಶ್ಯಾಮ್ ಶರಣ್ ನೇಗಿ(106) ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಗೆ 34ನೇ ಸಲ ಮತದಾನ ಮಾಡಿದ್ದಾರೆ.

ಹಿಮಾಚಲ ಪ್ರದೇಶದ ಬುಡಕಟ್ಟು ಕಿನ್ನೌರ್ ಜಿಲ್ಲೆಯ ಶ್ಯಾಮ್ ಶರಣ್ ನೇಗಿ, ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸಿದ ಮೊತ್ತ ಮೊದಲ ಮತದಾರ ಆ ಗಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕರಾಗಿದ್ದ ನೇಗಿ, 14ನೇ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಗೆ ಕಲ್ಪಾದಲ್ಲಿರುವ ತಮ್ಮ ಮನೆಯಲ್ಲಿ ಅಂಚೆ ಮೂಲಕ ಮತದಾನದ ಹಕ್ಕು ಚಲಾಯಿಸಿ ದರು.

1917ರ ಜುಲೈಯಲ್ಲಿ ಜನಿಸಿದ ನೇಗಿ ಅವರು 1951ರಲ್ಲಿ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದರು. ಈವರೆಗೆ ಲೋಕಸಭೆಯಲ್ಲಿ 16 ಬಾರಿ ಮತ್ತು 1951ರ ನಂತರ ಪ್ರತಿ ಲೋಕಸಭೆ, ವಿಧಾನಸಭೆ ಮತ್ತು ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಮತ ಚಲಾಯಿಸಿದ್ದಾರೆ. 2014ರಲ್ಲಿ ಅವರನ್ನು ಹಿಮಾಚಲ ಪ್ರದೇಶದ ರಾಜ್ಯ ಚುನಾವಣೆ ಐಕಾನ್ ಆಗಿ ಗುರುತಿಸಲಾಗಿತ್ತು.

ಮತದಾನದ ಬಳಿಕ ಪ್ರತಿಕ್ರಿಯಿಸಿರುವ ಅವರು, ಪ್ರಜಾತಂತ್ರವನ್ನು ಬಲಗೊಳಿಸಲು ಎಲ್ಲರೂ ಮತದಾನದ ಹಕ್ಕು ಚಲಾಯಿಸ ಬೇಕು ಎಂದು ಮನವಿ ಮಾಡಿದರು.

ಹಿಮಾಚಲದಲ್ಲಿ ಅಂಚೆ ಮೂಲಕ ಮತದಾನ ನ.1ರಿಂದ ಆರಂಭವಾಗಿದ್ದು, ನ.11ರಂದು ಪೂರ್ಣಗೊಳ್ಳಲಿದೆ.

error: Content is protected !!